ಶಬರಿಮಲೆಗೆ ಹೋಗುವ ದಾರಿ ಮಧ್ಯೆಯೇ ನಡೆಯುತ್ತಿತ್ತು ಘೋರ ದುರಂತ..!! ಬಸ್ ಪ್ರಪಾತಕ್ಕೆ ಬಿದ್ರೂ ಅದರಲ್ಲಿದ್ದ ಮಾಲಾಧಾರಿಗಳು ಸೇಫ್..!

  • 04 Jan 2025 03:20:32 PM

ಕೋಟಯಂ: ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಭೀಕರ ಅಪಘಾತ ಪ್ರಕರಣಗಳನ್ನು ನೋಡುತ್ತಿದ್ದರೆ ಮೈ ಜುಂ ಎನಿಸುತ್ತದೆ. ಮೊನ್ನೆ ಮೊನ್ನೆ ತಾನೇ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಮಾಲಾಧಾರಿಗಳಿದ್ದ ವಾಹನವೊಂದು ಭೀಕರ ಅಪಘಾತಕ್ಕೀಡಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಮುನ್ನವೇ ಮಾಲಾಧಾರಿಗಳು ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ಹೃದಯ ಕರಗಿಸಿತ್ತು.

 

ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿದೆ.

 

ಕೊಟ್ಟಾಯಂನ ಘಾಟ್ ರಸ್ತೆಯಲ್ಲಿ ಚಾಲಕನ ಕಂಟ್ರೋಲ್ ತಪ್ಪಿದ ಬಸ್...!!

 

ಕೇರಳದಲ್ಲಿ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ಸೊಂದು ಅಪಘಾತಕ್ಕೀಡಾಗಿದ್ದು ಕೊಟ್ಟಾಯಂನ ಘಾಟ್ ರಸ್ತೆಯಲ್ಲಿ ಚಾಲಕನ ಕಂಟ್ರೋಲ್ ತಪ್ಪಿ ಬಸ್ಸೊಂದು ಪ್ರಪಾತದ ಕಡೆ ಜಾರಿ ಬಿದ್ದಿದೆ.

 

ಆದರೆ ಅದೃಷ್ಡವಶಾತ್ ರಸ್ತೆಯ ಬದಿಯಲ್ಲಿ ಮರಗಳಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದ್ದು ಮಾಲಾಧಾರಿಗಳು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಪಂಬಾ ನದಿಯಿಂದ ಹದಿನೈದು ಕಿ.ಮೀ ದೂರದಲ್ಲಿ ಈ ಅಚಾನಕ್ ಘಟನೆಯೊಂದು ಸಂಭವಿಸಿದೆ. 

 

ಪ್ರಪಾತಕ್ಕೆ ಬಿದ್ದ ಬಸ್, ಮಾಲಾಧಾರಿಗಳು ಬಚಾವ್...! ಡ್ರೈವರ್ ದಾರುಣ ಸಾವು...!

 

ಹೈದರಾಬಾದ್ ನಿಂದ ಮೂವತ್ತು ಅಯ್ಯಪ್ಪ ಭಕ್ತರ ತಂಡವೊಂದು ಶಬರಿಮಲೆಗೆ ಹೊರಟಿತ್ತು. ಘಾಟ್ ರಸ್ತೆಯಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್ ಪ್ರಪಾತಕ್ಕೆ ಜಾರಿದೆ. ಅಪಘಾತದ ಭೀಕರತೆಗೆ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

 

ಇನ್ನುಳಿದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರಾದ ಬಂಡಿ ಸಂಜಯ್ ಕುಮಾರ್ ಅವರು ಗಾಯಾಳು ಮಾಲಾಧಾರಿಗಳಿಗೆ ಶಬರಿಮಲೆಯಲ್ಲಿ ಅಯ್ಯಪ್ಪನ ವಿಶೇಷ ದರ್ಶನ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.