ಮಡಿಕೇರಿ:ಬೆಳಗಾದರೆ ಸಾಕು ಅಪಘಾತ ಪ್ರಕರಣಗಳ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ದುರಂತಕ್ಕೀಡಾಗಿ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಆದರಲ್ಲೂ ಇಲ್ಲಿ ನಡೆದ ಅಪಘಾತದ ಘಟನೆಯೊಂದು ಕಣ್ಣಂಚಿನಲ್ಲಿ ನೀರು ತರಿಸೋದಂತೂ ಸತ್ಯ. ಸಾವು ಅನ್ನೋದು ಯಾರನ್ನೂ ಕಾಯೋದಿಲ್ಲ ಅಂತ ಹೇಳೋದು ಇದಕ್ಕೇ ನೋಡಿ...
ಕಂಟ್ರೋಲ್ ತಪ್ಪಿದ ಲಾರಿಯಿಂದ ಹಾರಿದ ಚಾಲಕ, ಚಕ್ರದಡಿ ಸಿಲುಕಿ ದುರ್ಮರಣ...!!
ಚಲಿಸುತ್ತಿದ್ದಾಗಲೇ ನಿಯಂತ್ರಣ ತಪ್ಪಿದ ಲಾರಿಯಿಂದ ಚಾಲಕನೋರ್ವ ಹಾರಿ ಚಕ್ರದಡಿ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಶನಿವಾರ ಸಂತೆ ಸಮೀಪದ ಗುಡುಗಳಲೆ ಗ್ರಾಮದಲ್ಲಿ ನಡೆದಿದೆ.
ಸುಂಕಪ್ಪ ಮೃತಪಟ್ಟ ದುರ್ದೈವಿಯಾಗಿದ್ದು ಲಾರಿಯಲ್ಲಿದ್ದ ನರೇಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.
ನಡೆದ ಘಟನೆ ಏನು..?
ಆಂಧ್ರಪ್ರದೇಶದಿಂದ ಸೋಮವಾರಪೇಟೆಗೆ ಸಿಮೆಂಟ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ಕಂಟ್ರೋಲ್ ತಪ್ಪಿ ರಸ್ತೆ ಬದಿ ವಾಲಿದೆ. ಲಾರಿ ಪಲ್ಟಿಯಾಗುವ ಅಪಾಯ ಅರಿತ ಚಾಲಕ ಹಾಗೂ ಮತ್ರೋರ್ವ ಲಾರಿಯಿಂದ ಜಿಗಿದಿದ್ದಾರೆ.
ಸುಂಕಪ್ಪ ಹಾರಿದ ರಭಸದಲ್ಲಿ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದು ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಶನಿವಾರ ಸಂತೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.