ಪಾಂಡುಪುರ: ಇತ್ತೀಚಿಗೆ ಹಲವಾರು ಲವ್ ಜಿಹಾದ್ ಪ್ರಕರಣಗಳು ದಾಖಲಾಗುತ್ತಿದೆ. ಹಿಂದೂ ಹೆಣ್ಣುಮಕ್ಕಳ ಮೇಲೆ ಅನ್ಯಮತೀಯ ಯುವಕರ ಕಣ್ಣು ಹೊಂಚು ಹಾಕುತ್ತಲೇ ಇದೆ. ಹಲವಾರು ಹೆಣ್ಣು ಮಕ್ಕಳು ಮೋಸದ ಜಾಲಕ್ಕೆ ಸಿಲುಕಿ ತಮ್ಮ ಜೀವನವನ್ನು ಸರ್ವನಾಶ ಮಾಡಿಕೊಂಡಿದ್ದಾರೆ. ಅಂತಹ ಸುದ್ದಿಗಳು ಹಲವಾರು ಪ್ರಚಲಿತವಾಗುತ್ತಿದ್ದರು ಕೂಡ ಇನ್ನೂ ಸಹ ಅದನ್ನರಿಯದೆಯೋ ಅರಿತೋ ಲವ್ ಜಿಹಾದ್ ನ ಕುತಂತ್ರಕ್ಕೆ ಸಿಲುಕಿಕೊಳ್ಳುವುದೇ ಸಹಿಸಲಾಗದ ನೋವಾಗಿ ಪರಿಣಮಿಸಿದೆ.
ಜೀವನವೇನೆಂಬುದು ಅರಿಯುವ ಮುನ್ನ ಇಂತಹ ಜಾಲಕ್ಕೆ ಸಿಲುಕಿಕೊಂಡರೆ ಜೀವನ ಪರ್ಯಂತ ಪಶ್ಚಾತಾಪ ಪಡಲು ಸಾಧ್ಯವಾಗದೆ ನರಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಈ ಕಹಿ ಸತ್ಯವು ಯಾವ ಹೆಣ್ಣು ಮಕ್ಕಳ ಜೀವನದಲ್ಲೂ ಆಗದಿರಲಿ ಎಂದು ಅಂದು ಕೊಂಡರೂ ಹೋರಾಟ ನಡೆಸಿದರು ಕೂಡ ದಿನೇ ದಿನೇ ಇಂತಹ ಸುದ್ದಿ ಕೇಳುತ್ತಲೇ ಇದೆ.
ಪಾಂಡುಪುರ ತಾಲೂಕಿನಲ್ಲಿ ಲವ್ ಜಿಹಾದ್ ಪ್ರಕರಣ:
ಪಾಂಡುಪುರ ತಾಲೂಕಿನ ನ್ಯಾಮನಹಳ್ಳಿ ಯ ಹಿಂದೂ ಹುಡುಗಿ *ಲವ್ ಜಿಹಾದ್* ಬಲೆಗೆ ಬಿದ್ದು ಗುಂಡ್ಲುಪೇಟೆ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗುತ್ತಿದ್ದಾಳೆ. ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿವೆ.
ಕೂಡಲೇ ಈ ಗ್ರಾಮದ ಹುಡುಗಿಯ ಪೋಷಕರೊಂದಿಗೆ ಮಾತನಾಡಿದರೆ ಈ ಜಿಹಾದ್ ಬಲೆಯಿಂದ ಒಂದು ಹೆಣ್ಮು ಮಗಳ ಜೀವನ ಉಳಿಸಲು ಸಾಧ್ಯ ಎಂದು ಹಿಂದು ಕಾರ್ಯಕರ್ತರು ತಿಳಿಸಿದ್ದಾರೆ.