ಜೋಡುಕಲ್ : ಜೋಡುಕಲ್ ಗ್ರಾಮದಲ್ಲಿ ಕ್ರೈಸ್ತ ಮಿಷನರಿಯು, ಜನರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಮಾಹಿತಿ ದೊರೆತ ಬಜರಂಗದಳದ ಕಾರ್ಯಕರ್ತರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯ ವೇಳೆಯಲ್ಲಿ ಮಿಷನರಿಯನ್ನು ಸಾರ್ವಜನಿಕರ ಸಹಾಯದಿಂದ ಸೆರೆ ಹಿಡಿಯಲಾಯಿತು.
ಸಾರ್ವಜನಿಕರು ಮಿಷನರಿಯನ್ನು ಹಿಡಿದು ಗೂಸಾ ಕೊಟ್ಟು, ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ತಂಡ ಸ್ಥಳಕ್ಕೆ ತಕ್ಷಣವೇ ಆಗಮಿಸಿ, ಆರೋಪಿತನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದೆ. ಈ ಕುರಿತು ಧರ್ಮ ಬಲವಂತದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಜರಂಗದಳದ ಕಾರ್ಯಕರ್ತರು ಇಂತಹ ಮತಾಂತರ ಚಟುವಟಿಕೆಗಳನ್ನು ತಡೆಯಲು ತಾವು ಸದಾ ಸಜ್ಜಾರಾಗಿದ್ದೇವೆ ಎಂದು ಹೇಳಿದ್ದಾರೆ. ಸ್ಥಳೀಯರು ಈ ಘಟನೆ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ.