ಬಸವನಗುಡಿ: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ 'ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ' ನೃತ್ಯ ತರಬೇತಿ ಪಡೆಯುತ್ತಿದ್ದ 15 ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ಮೃತಪಟ್ಟಿದ್ದಾಳೆ.ಬಸವನಗುಡಿ ನ್ಯಾಷನಲ್ ಕಾಲೇಜ್ ಬಳಿ ನಿರ್ಮಾಣ ಹಂತದ ಕಟ್ಟಡ ಸೆಂಟ್ರಿಂಗ್ ಗೆ ಬಳಸಿದ್ದ ಮರದ ಕಂಬ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಆಗಿದ್ದೇನು?
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ತೇಜಸ್ವಿನಿ ಅತ್ಯುತ್ತಮ ನೃತ್ಯ ಪಟುವಾಗಿದ್ದಳು. ಅಪ್ಪು ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿನಿಯಾಗಿದ್ದ ಈಕೆ ಇತ್ತೀಚೆಗಷ್ಟೇ ನಡೆದು ಹೋಗುತ್ತಿದ್ದಾಗ ಬಸವನಗುಡಿ ನ್ಯಾಷನಲ್ ಕಾಲೇಜ್ ಬಳಿ ನಿರ್ಮಾಣ ಹಂತದ ಕಟ್ಟಡ ಸೆಂಟ್ರಿಂಗ್ ಗೆ ಬಳಸಿದ್ದ ಕಬ್ಬಿಣದ ಕಂಬ ಬಿದ್ದಿದೆ. ಗಂಭೀರ ಗಾಯಗೊಂಡ ಈಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈಕೆ ಅಸುನೀಗಿದ್ದಾಳೆ.
ಪ್ರಕರಣ ದಾಖಲು!
ವಿ.ವಿ ಪುರ ಠಾಣೆಯ ಬಳಿಕವೇ ಬಹುಮಹಡಿ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ನಡೆಯುತ್ತಿತ್ತು. ಇದೇ ಕಟ್ಟಡದಿಂದ ಕಂಬ ಬಿದ್ದು ಬಾಲಕಿ ಮೃತಪಟ್ಟಿದ್ದು, ಬಾಲಕಿಯ ತಂದೆ ಕಟ್ಟಡ ಮಾಲಿಕರ ಬೆಜವಾಬ್ದಾರಿ ತನವೇ ಇದಕ್ಕೆ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.