ಬೆಂಗಳೂರು: ಈಗಾಗಲೇ ಇಡೀ ವಿಶ್ವಕ್ಕೆ ಲಗ್ಗೆಯಿಟ್ಟಿದ್ದ ಕೊರೋನಾ ವೈರಸ್ ಒಂದು ಬಾರಿ ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿಬಿಟ್ಟಿತ್ತು. ಇದರಿಂದ ಅದೆಷ್ಟೋ ಸಾವು- ನೋವುಗಳು, ಸಂಕಷ್ಟವನ್ನು ದೇಶ ಎದುರಿಸಿತ್ತು. ಇದೀಗ ಚೀನಾದಲ್ಲಿ ಮತ್ತೆ ಹೊಸದೊಂದು ವೈರಸ್ ಎಂಟ್ರಿ ಕೊಟ್ಟಿದ್ದು ಅಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಶಾಕಿಂಗ್ ವಿಚಾರವೆಂದರೆ ಹೊಸ ವೈರಸೊಂದು ಬೆಂಗಳೂರಿಗೂ ಕಾಲಿಟ್ಟಿದೆ.
9 ತಿಂಗಳ ಮಗುವಿನಲ್ಲಿ ಹೆಚ್ಎಂಪಿವಿ ವೈರಸ್ ಪತ್ತೆ...!
ಬೆಂಗಳೂರಿನಲ್ಲಿ ಮೊದಲ ಹೆಚ್ಎಂಪಿವಿ ವೈರಸ್ ಪತ್ತೆಯಾಗಿದೆ. ಜ್ವರ ಬಂದ ಕಾರಣದಿಂದಾಗಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಈ ವೈರಸ್ ಪತ್ತೆಯಾಗಿದ್ದು ವೈದ್ಯರೇ ದಂಗಾಗಿದ್ದಾರೆ. ಇದು ಕರ್ನಾಟಕದಲ್ಲಿ ಮತ್ತು ಇಡೀ ಭಾರತದಲ್ಲಿ ಕಂಡುಬಂದ ಮೊದಲ ಪ್ರಕರಣವಾಗಿದ್ದು ಬೇರೆಲ್ಲೂ ಪ್ರಕರಣ ವರದಿಯಾಗಿಲ್ಲ.
ಮಹತ್ವದ ಸೂಚನೆ ಹೊರಡಿಸಿದ ಆರೋಗ್ಯ ಇಲಾಖೆ..!
ಶೀತ, ಜ್ವರ, ಕೆಮ್ಮು, ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಆರೋಗ್ಯ ಇಲಾಖೆಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ವೈರಸ್ ಕುರಿತು ಆತಂಕಪಡುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಈ ರೀತಿಯ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಜನಸಾಮಾನ್ಯರು ಧೃತಿಗೆಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು ಅಗತ್ಯವಾಗಿದೆ. ಅಷ್ಟೇ ಅಲ್ಲದೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವುದು ಕೂಡಾ ಒಳ್ಳೆಯದು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಹತ್ತರ ಸೂಚನೆಯನ್ನು ಹೊರಡಿಸಿದೆ.