ಮಣಿಪಾಲ:ರಾಜ್ಯದ ಪ್ರಮುಖ ನಗರಗಳಲ್ಲಿ ಅಕ್ರಮ ವೆಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಸದ್ಯ, ಮಣಿಪಾಲದಲ್ಲಿ ನಾಲ್ವರು ಅಕ್ರಮವಾಗಿ ನಡೆಸುತ್ತಿದ್ದ ವೆಶ್ಯಾವಾಟಿಕೆ ಅಡ್ಡೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡಿ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ.ಈ ಬಗೆಗಿನ ವರದಿ ಇಲ್ಲಿದೆ.
ಬಲವಂತದ ವೆಶ್ಯಾವಾಟಿಕೆ!
ಮಣಿಪಾಲದ ಶಿವಳ್ಳಿ ಗ್ರಾಮಕ್ಕೆ ಸೇರಿದ ಪೆರಂಪಳ್ಳಿಯಲ್ಲಿರುವ ವಸತಿ ಸಮುಚ್ಚಯದ ಎರಡನೇ ಮಹಡಿಯಲ್ಲಿ ಕೆಲ ಸಮಯದಿಂದ ಅಕ್ರಮ ವೆಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಪೊಲೀಸ್ ದೂರು ದಾಖಲಿಸಿದ್ದರು. ಅಪಾರ್ಟ್‌ಮೆಂಟ್ ನಲ್ಲಿ ಬಲವಂತವಾಗಿ ಮಹಿಳೆಯರನ್ನು ಇರಿಸಿಕೊಂಡು ಅಕ್ರಮ ವೆಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಇದೀಗ ದಾಳಿ ನಡೆಸಿದ್ದಾರೆ.
ನಾಲ್ವರು ಅರೆಸ್ಟ್!
ವಸತಿ ಸಮುಚ್ಚಯದಲ್ಲಿ ಬಲವಂತವಾಗಿ ಮಹಿಳೆಯರನ್ನು ಬಳಸಿಕೊಂಡು ಅಕ್ರಮ ವೆಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣದ ಪ್ರಮುಖ ರೂವಾರಿಗಳಾದ ರವೀಶ, ರಘುನಂದನ, ಅಮೀನಾ ಬೇಗಂ ಹಾಗೂ ಡಯಾನಾ ಲೂವಿಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಸ್ಥಳದಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.