ಮಂಗಳೂರು| ಎಂಆರ್ ಪಿಎಲ್ ನಲ್ಲಿ ಉದ್ಯೋಗ ಕೊಡಿಸೋದಾಗಿ ನಂಬಿಸಿ ಲಕ್ಷಾಂತರ ರೂ. ದೋಖಾ, ಟೋಪಿ ಹಾಕಿದಾತ ಅರೆಸ್ಟ್...!!

  • 07 Jan 2025 09:31:29 PM

ಕಾರ್ಕಳ: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಉದ್ಯೋಗಕ್ಕಾಗಿ ಅಲೆದಾಡುತ್ತಿರೋದು ವಿಪರ್ಯಾಸ. ಯಾವುದಾದರೂ ಕೆಲಸ ಸಿಕ್ಕರೆ ಸಾಕು ಸೇರಿಕೊಂಡು ಬಿಡೋಣ ಅನ್ನೋ ಅನ್ನೋ ಮನಸ್ಥಿತಿಯಲ್ಲಿರುತ್ತಾರೆ. ಆದರೆ ಇದನ್ನೇ ತಂತ್ರವನ್ನಾಗಿಸಿಕೊಂಡು ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. 

 

ಏನಿದು ಘಟನೆ..?

 

ಮುಲ್ಲಡ್ಕ ಗ್ರಾಮದ ಸುಚಿತ್ ಎಂಬ ಯುವಕ (29) ಉದ್ಯೋಗ ಹುಡುಕುತ್ತಿದ್ದನು. ಈತನ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಅವಿನಾಶ್ ಎಂಬಾತ ಮಂಗಳೂರು ಕದ್ರಿಯಲ್ಲಿರುವ ತನ್ನ ಸನ್ನಿಧಿ ಇಂಟಿರಿಯರ್ ಡಿಸೈನ್ ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಸುಚಿತ್ ನ ಗೆಳತಿಯ ಮೂಲಕ ಎಂಆರ್ ಪಿಎಲ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ತಿಳಿಸಿದ್ದನು.

 

ತಾನು ನೇರವಾಗಿ ತಿಳಿಸಿದರೆ ಆತನಿಗೆ ಅನುಮಾನ ಬರಬಹುದು ಎಂದು ಮೊದಲೇ ಉಪಾಯ ಮಾಡಿ ಆತನ ಗೆಳತಿಯ ಮೂಲಕ ಈ ಕೆಲಸದ ಬಗ್ಗೆ ತಿಳಿಸಿದ್ದನು. ಎಂಆರ್ ಪಿಎಲ್ ಮಂಗಳೂರಿನ ಪ್ರತಿಷ್ಠಿತ ಕಂಪೆನಿಯಾಗಿದ್ದರಿಂದ ಕೆಲಸ ಸಿಕ್ಕರೆ ಉತ್ತಮ ವೇತನ ಪಡೆಯಬಹುದು ಮತ್ತು ತಾನೂ ಕೂಡಾ ಕೆಲಸಕ್ಕಾಗಿ ಅಲೆದಾಡುತ್ತಿದ್ದುದರಿಂದ ಸುಚಿತ್ ಇದನ್ನು ನಿಜವೆಂದೇ ನಂಬಿದ್ದನು.

 

ಹಣಕ್ಕಾಗಿ ಡಿಮ್ಯಾಂಡ್, ನಂಬಿ ಮೋಸ ಹೋದ ಮುಗ್ಧ ಯುವಕ..! 

 

ಗೆಳತಿ ವಿಷಯ ತಿಳಿಸಿದ ತಕ್ಷಣ ಈ ಬಗ್ಗೆ ಅವಿನಾಶ್‌ನೊಂದಿಗೆ ಸುಚಿತ್ ಮಾತನಾಡಿದ್ದು, ಆಗ ಅವಿನಾಶ್ 1,05,600ರೂ. ಹಣ ಕೊಡಬೇಕು ಎಂದು ತಿಳಿಸಿದ್ದನು. ಹಣ ಆದಷ್ಟು ಬೇಗ ನೀಡಿದ್ರೆ ಡಿ.13ರಂದು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು.

 

ಅದರಂತೆ ಸುಚಿತ್ ಅವನ ಮಾತನ್ನು ನಂಬಿ ನವೆಂಬರ್ 18ರಿಂದ ಡಿ.26ರವರೆಗೆ ಗೂಗಲ್ ಪೇ ಮೂಲಕ ಮತ್ತು 20,000ರೂ. ಹಣವನ್ನು ನಗದಾಗಿ ಅವಿನಾಶ್‌ಗೆ ಪಾವತಿಸಿದ್ದನು. ಆದರೆ ಅವಿನಾಶ್ ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಒಟ್ಟು 1,05,600ರೂ. ಪಡೆದುಕೊಂಡಿದ್ದಾನೆ.

 

ಈತ ಲಕ್ಷಾಂತರ ರೂ. ಹಣ ಪಡೆದುಕೊಂಡು ಕೆಲಸವನ್ನು ಕೊಡಿಸದೇ ಮೋಸ ಮಾಡಿರುವುದಾಗಿ ಸುಚಿತ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾನೆ.