ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಭೂಕಂಪ, 7.1ತೀವ್ರತೆಯು ಕಂಪನ; 100 ಕ್ಕೂ ಹೆಚ್ಚು ಜನರ ಸಾವು ...!

  • 08 Jan 2025 03:19:40 PM

ನೇಪಾಳ: ಮಂಗಳವಾರ ಬೆಳಗಿನ ಸಮಯ 6.30ರ ಸುಮಾರಿಗೆ ನೇಪಾಳ-ಟಿಬೆಟ್ ಗಡಿಯಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು ಕನಿಷ್ಠ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 130 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಭೂಕಂಪದಿಂದ ಮನೆ, ಕಟ್ಟಡಗಳು ಕುಸಿದು ಅಪಾರ ನಾಶ ಸಂಭವಿಸಿದೆ. ಸ್ಥಳೀಯರು ಪ್ರಾಣರಕ್ಷೆಗಾಗಿ ಓಡುತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ.

 

ಈ ಭೂಕಂಪನದ ಪ್ರಭಾವ ನೇಪಾಳದ ಪಕ್ಕದ ದೇಶಗಳ ಮೇಲೂ ಬೀರಿದ್ದು, ಭಾರತದ ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಕಂಪನದ ಅನುಭವ ಉಂಟಾಗಿದೆ. 

 

ಪ್ರಭಾವಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ತಕ್ಷಣ ಪ್ರಾರಂಭಿಸಿದರು. ಮಣ್ಣಿನ ಕೆಳಗೆ ಸಿಲುಕಿದವರನ್ನು ರಕ್ಷಿಸಲು ತೀವ್ರ ಪರಿಶ್ರಮ ನಡೆಸಲಾಗುತ್ತಿದೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅನಾಹುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.