ಸಹೋದರನಿಂದಲೇ ಗರ್ಭಿಣಿಯಾದ ಯುವತಿ!;ವಿಲಕ್ಷಣಕ ಘಟನೆ ಮದುವೆಯಲ್ಲಿ ಅಂತ್ಯ!

  • 09 Jan 2025 01:14:51 PM

ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ತಾಯಿ-ಮಗ ಮದುವೆಯಾದ ಘಟನೆಯನ್ನು ಕೇಳಿದ್ದೀರಿ. ಇದೀಗ ಅಣ್ಣ-ತಂಗಿ ಮದುವೆಯಾದ ವಿಲಕ್ಷಣ ಘಟನೆಯೊಂದು ವರದಿಯಾಗಿದೆ.

 

ತನ್ನ ಸಹೋದರನಿಂದಲೇ ಗರ್ಭಿಣಿಯಾದ ಯುವತಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಷ್ಟೇ ಅಲ್ಲದೇ ಮದುವೆಯಾಗಿದ್ದಾಳೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗೆಗಿನ ವರದಿ ಇಲ್ಲಿದೆ‌.

 

ಅಣ್ಣನಿಂದಲೇ ಗರ್ಭಿಣಿಯಾದ ತಂಗಿ!

 

ವಿಡಿಯೋದಲ್ಲಿ ಇಬ್ಬರು ಮದುವೆಯ ವೇಷಭೂಷಣ ತೊಟ್ಟಿದ್ದಾರೆ. ಸ್ವತಃ ಯುವತಿ, 'ಈತ ನನ್ನ ಸಹೋದರ ನಾನು ಇವನಿಗೆ ತಂಗಿ ಆಗಬೇಕು. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ‌. ನಾನು ಈಗ ಗರ್ಭಿಣಿಯಾಗಿದ್ದೇನೆ.

 

ಈ ಪ್ರೀತಿಯನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ.‌ನಾವಿಬ್ಬರು ಮದುವೆಯಾಗಿದ್ದೇವೆ' ಎಂದಿದ್ದಾಳೆ.

 

ನೆಟ್ಟಿಗರ ಆಕ್ರೋಶ!

 

ಈ ವಿಡಿಯೋದಲ್ಲಿ ಇರುವುದು ಯಾರು? ಎಲ್ಲಿ? ಎಂಬುದರ ಬಗ್ಗೆ ನಿಖರ ಮಾಹಿತಿಗಳಿಲ್ಲ. ಆದರೆ ವಿಡಿಯೋ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಣ್ಣ-ತಂಗಿ ಅನ್ನುವುದು ಪವಿತ್ರ ಸಂಬಂಧ.

 

ಇಂತಹ ಸಂಬಂಧವನ್ನು ಹಾಳು ಮಾಡುತ್ತಿದ್ದೀರಿ‌. ನಿಮ್ಮಿಂದಾಗಿ ಹಿಂದೂ ಧರ್ಮಕ್ಕೆ ಅವಹೇಳನವಾಗಿದೆ' ಎಂದು ಛೀಮಾರಿ ಹಾಕಿದ್ದಾರೆ.