ಮಲಪ್ಪುರಂ- ಕೇರಳದ ಮಲಪ್ಪುರಂನಲ್ಲಿನ ತಿರೂರು ಬಳಿಯ ಮಸೀದಿಯೊಂದರ ಧಾರ್ಮಿಕ ಆಚರಣೆಯ ವೇಳೆ ಉತ್ಸವಕ್ಕಾಗಿ ಸಿಂಗಾರಗೊಂಡಿದ್ದ ಆನೆಯೊಂದು ಏಕಾಏಕಿ ಕೆರಳಿದ್ದು, ಮೈದಾನದಲ್ಲಿ ಸೇರಿದ್ದ ಜನರ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಈ ಭೀಕರ ದಾಳಿಯಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, 22ಜನರಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ.
ಮಸೀದಿ ಆವರಣದಲ್ಲಿ ಆನೆಯ ಆರ್ಭಟ!
ಮಲಪ್ಪುರಂನ ತಿರೂರು ಯಾಹೂ ತಂಗಳ್ ಮಸೀದಿ ಆವರಣದಲ್ಲಿ ನಾಲ್ಕು ದಿನಗಳ ಧಾರ್ಮಿಕ ಉತ್ಸವ ನಡೆಯುತ್ತಿತ್ತು. ಇದಕ್ಕಾಗಿ ತರಭೇತಿ ಪಡೆದ ಐದು ಆನೆಗಳನ್ನು ಕರೆತರಲಾಗಿತ್ತು.
ಉತ್ಸವ ನಡೆಯುತ್ತಿದ್ದಾಗ ಪಕ್ಕೋತ್ ಶ್ರೀಕುಟ್ಟನ್ ಎಂಬ ಆನೆ ಏಕಾಏಕಿ ಕೋಪಗೊಂಡಿದ್ದು, ಸೇರಿದ್ದ ಜನರ ಮೇಲೆ ದಾಳಿ ನಡೆಸಿದೆ. ಆನೆಗೆ ಮದ ಏರಿದ ತಕ್ಷಣ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ!
ಪಕ್ಕೋತ್ ಶ್ರೀಕುಟ್ಟನ್ ಆನೆ ಮದ ಏರಿದ ತಕ್ಷಣ ಜನರ ಮೇಲೆ ದಾಳಿ ನಡೆಸಿದೆ. ಅಷ್ಟು ಮಾತ್ರವಲ್ಲದೆ ಸಮೀಪದಲ್ಲೇ ಇದಕ್ಕ ವ್ಯಕ್ತಿಯೊಬ್ಬನನ್ನು ಸೊಂಡಿಲಿನಿಂದ ಎತ್ತಿ ಎಸೆದಿದೆ.
ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, 22 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸದ್ಯ, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.