ಮಂಗಳೂರು | ಸಮುದ್ರ ತೀರದಲ್ಲಿ ಜ್ವಾಲಿ ಮೂಡ್ ನಲ್ಲಿದ್ದ ಮೂವರು ಯುವಕರು ನೀರುಪಾಲು, ಓರ್ವ ಬಚಾವ್..!

  • 09 Jan 2025 01:51:11 PM

ಮಂಗಳೂರು: ಗೆಳೆಯರ ಜೊತೆ, ಶಾಲಾ ಪ್ರವಾಸಕ್ಕೆಂದು ನಾವು ಸಮುದ್ರ ತೀರಕ್ಕೆ ಹೋಗೋದಾದ್ರೆ ಆದಷ್ಟು ಮುನ್ನೆಚ್ಚರಿಕೆ ವಹಿಸೋದು ಅಗತ್ಯ. ಯಾಕೆಂದರೆ ಅನಿರೀಕ್ಷಿತವಾಗಿ ಏನ್ ಅಪಾಯ ಸಂಭವಿಸುತ್ತೋ ಅರಿವಿಗೆ ಬರುವುದಿಲ್ಲ.

 

ಇತ್ತೀಚೆಗಂತೂ ಪ್ರವಾಸಕ್ಕೆಂದು ಬರುವ ಅನೇಕ ಯುವ ತರುಣರು ಮೋಜು- ಮಸ್ತಿಯಲ್ಲೇ ಮೈಮರೆತು ನೀರುಪಾಲಾಗಿ ದುರಂತ ಅಂತ್ಯ ಕಾಣುತ್ತಿರೋದು ವಿಪರ್ಯಾಸ. ಇದರ ನಡುವೆ ಇದೀಗ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದ ಘಟನೆ ಮತ್ತೆ ಜನರನ್ನು ಆತಂತಕ್ಕೀಡು ಮಾಡಿದೆ. 

 

ಈಜಲು ಸಮುದ್ರಕ್ಕೆ ಇಳಿದಿದ್ದ ಮೂರು ಯುವಕರು ನೀರುಪಾಲು...! 

 

ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ವರು ಯುವಕರ ಪೈಕಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಬುಧವಾರ ನಡೆದಿದೆ.

 

ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಶಿವಲಿಂಗಪ್ಪ ಎಂಬವರ ಪುತ್ರ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್, ಬೆಂಗಳೂರು ಜೆ.ಪಿ. ನಗರ ನಿವಾಸಿ ಸತ್ಯವೇಲು ಮೃತ ದುರ್ದೈವಿಗಳು.‌ ಅದೃಷ್ಟವಶಾತ್ ಬೀದರ್ ನ ಪರಮೇಶ್ವರ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. 

 

ಬೆಂಗಳೂರಿನಿಂದ ಪ್ರವಾಸಕ್ಕೆಂದು ಮಂಗಳೂರಿಗೆ ಬಂದಿದ್ದ ಗೆಳೆಯರು..!

 

ಇವರು ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಮಧ್ಯಾಹ್ನದ 12:30ರ ವೇಳೆಗೆ ಕುಳಾಯಿಜೆಟ್ಟಿ ಬಳಿಯ ಸಮುದ್ರ ಕಿನಾರೆಗೆ ಬಂದು ಸಮುದ್ರಕ್ಕೆ ಇಳಿದು ಆಡುತ್ತಾ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಸಮುದ್ರದ ಆಳ ಅರಿವಿಗೆ ಬಾರದೆ ನಾಲ್ವರು ಸಮುದ್ರ ಪಾಲಾಗಿದ್ದಾರೆ ಎನ್ನಲಾಗಿದೆ.

 

ಘಟನೆಯನ್ನು ಗಮನಿಸುತ್ತಿದ್ದ ಸ್ಥಳೀಯ ಮೀನುಗಾರರು ತಕ್ಷಣ ನಾಲ್ವರ ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲಾಗಲೇ ಮೂವರು ದುರಂತ ಅಂತ್ಯ ಕಂಡಿದ್ದು ಆತನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುರತ್ಕಲ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಹಜರು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.