ಕೊಳ್ನಾಡು ಗ್ರಾಮ ಪಂಚಾಯತ್ ನ ಮೇಲೆ ಮೀನು ವ್ಯಾಪಾರದಲ್ಲಿ ಪಕ್ಷಪಾತದ ಆರೋಪ; ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ!

  • 09 Jan 2025 08:30:12 PM

ಕೊಳ್ನಾಡು: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೆತ್ತೂರು ಮೈದಾನದಲ್ಲಿ ಮೀನು ಮಾರುಕಟ್ಟೆ ಇರುವುದರಿಂದ ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಮೀನು ಮಾರಾಟದ ಮಾಡುತ್ತಿರುವುದರ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ.

 

ಸಾಲೆತ್ತೂರು ಮೈದಾನದ ಸುಮಾರು ೩೦೦ ಮೀಟರ್ ಒಳಗಡೆ ಖಾಸಾಗಿ ವ್ಯಕ್ತಿಗಳಿಗೆ ಮೀನು ಮಾರಾಟ ಮಾಡುವ ಹಾಗೆ ಇಲ್ಲ ಎಂದು ನಿಯಮವಿದೆ.

 

ಆದರೂ ಸಹ ಸಾಮಾನ್ಯ ವ್ಯಾಪಾರಿಗಳಿಗೆ ಕಿರುಕುಳ ನೀಡಲಾಗುತ್ತಿದ್ದು, ಅಲ್ಪಸಂಖ್ಯಾತರಿಗೆ ಮಾತ್ರ ಸಹಾನುಭೂತಿ ತೋರುತ್ತಿರುವುದಾಗಿ ಆರೋಪಿಸಿದ್ದಾರೆ. 

 

ಚಲಿಸುವ ವಾಹನಗಳಲ್ಲಿ ಮೀನು ಮಾರಾಟ ಮಾಡುವ ಬಹು ಸಂಖ್ಯಾ ಸಮಾಜಕ್ಕೆ ಸೇರಿದ ವ್ಯಕ್ತಿಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ,

 

ಆದರೆ ಅಲ್ಪಸಂಖ್ಯಾತ ಸಮಾಜಕ್ಕೆ ಸೇರಿದ ವ್ಯಾಪಾರಗಳಿಗೆ ಪಂಚಾಯತ್ ಅಧ್ಯಕ್ಷರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ಸಾಲೆತ್ತೂರು ಮೈದಾನದ 300 ಮೀಟರ್ ವ್ಯಾಪ್ತಿಯಲ್ಲಿ ಮೀನು ಮಾರಾಟಕ್ಕೆ ನಿಷೇಧವಿದ್ದರೂ, ಕೆಲವರಿಗೆ ಅನುಮತಿ ನೀಡಿರುವುದು ಜನಸಾಮಾನ್ಯರಲ್ಲಿ ಅಸಮಾಧಾನವನ್ನುಂಟು ಮಾಡಿದೆ.

 

ಹಾಗೆಯೇ ಈ ವಿಷಯವನ್ನು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

ಸಾಮಾನ್ಯ ನಾಗರಿಕರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸುದರೊಂದಿಗೆ ಅಕ್ರಮ ಕೃತ್ಯಗಳಿಗೆ ಅಂತ್ಯ ಮಾಡುವಂತೆ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.

 

ನ್ಯಾಯಯುತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಗ್ರಾಮ ಪಂಚಾಯತಿನ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ನಾಗರಿಕರು ದೂರಿನಲ್ಲಿ ಎಚ್ಚರಿಸಿದ್ದಾರೆ.

 

ಗ್ರಾಮ ಪಂಚಾಯತ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ವ್ಯಕ್ತಿಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ