ಹಿಂ.ಜಾ.ವೇ ಅಧಿನಾಯಕ ಜಗದೀಶ್ ಕಾರಂತ ಅವರ ಕರಾವಳಿ ಪ್ರವಾಸ!

  • 09 Jan 2025 11:07:07 PM

ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಹಾಗೂ ಅಖಿಲಭಾರತ ಟೋಳಿ ಸದಸ್ಯರಾದ ಶ್ರೀ ಜಗದೀಶ್ ಕಾರಂತ ಅವರು ಇಂದು ಕರಾವಳಿ ಪ್ರವಾಸ ಕೈಗೊಂಡರು. 

 

ಈ ಪ್ರವಾಸದ ಭಾಗವಾಗಿ, ಹಿಂ.ಜಾ.ವೇ. ವಿಧಿ ಆಯಾಮದ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಅವರ ತಂದೆಯು ಮೊನ್ನೆ ವಿಧಿವಶರಾಗಿದ್ದರು. ಅದರ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನದ ಮಾತುಗಳನ್ನು ಹೇಳಿದರು.

 

ಹಾಗೆಯೇ ಜಗದೀಶ್ ಕಾರಂತ ಅವರು ಈ ವೇಳೆ, ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಪ್ರಶಾಂತ್ ಕೆಂಪುಗುಡ್ಡೆ ಮತ್ತು ಹಲವು ಕಾರ್ಯಕರ್ತರೊಂದಿಗೆ ಶಬರಿಮಲೆ ಯಾತ್ರೆಯ ಇರುಮುಡಿ ಕಟ್ಟುವ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದರು.

 

 

ಈ ಸಂದರ್ಭದಲ್ಲಿ, ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಘಟಕರಾದ ಪ್ರಶಾಂತ್ ಬಂದ್ಯೂಡ್, ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣೆ, ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್, ದಿನೇಶ್ ಪಂಜಿಗ, ಪುಷ್ಪರಾಜ್ ಕಮ್ಮಾಜೆ, ಹರ್ಷ ವಿಟ್ಲ ಮತ್ತು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.