ತ್ರಿಶೂರ್: ಪ್ರಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ (80) ಅವರು ಜನವರಿ 9ರಂದು ಕೇರಳದ ತ್ರಿಶೂರ್‌ನಲ್ಲಿ ವಿಧಿವಶರಾದರು. 1944ರ ಮಾರ್ಚ್ 3ರಂದು ಕೇರಳದ ಎರ್ನಾಕುಲಂನಲ್ಲಿ ಜಯಚಂದ್ರನ್ ಜನಿಸಿದರು.
1966ರಲ್ಲಿ ಮಲಯಾಳಂ ಚಲನಚಿತ್ರ ಕಲಿತೋಝನ್ ನಲ್ಲಿ ಮಂಜಲಾಯಿಲ್ ಮುಂಗಿತೋರ್ತ ಎಂಬ ಹಾಡಿನ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆರು ದಶಕಗಳ ಗಾನ ಯಾತ್ರೆಯಲ್ಲಿ ಮಲಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಎಂಬಂತೆ 16,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
1986ರಲ್ಲಿ ಶಿವಶಂಕರ ಸರ್ವ ಶರಣ್ಯ ವಿಭೋ ಎಂಬ ಗೀತೆಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅಲ್ಲದೆ ಹಲವಾರು ಭಾರಿ ಕೇರಳ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕನ್ನಡದಲ್ಲಿ ಹಾಡಿದ ಹಿಂದೂಸ್ಥಾನವೂ ಎಂದೂ ಮರೆಯದ ಸೇರಿದಂತೆ ಅನೇಕ ಪ್ರಸಿದ್ಧ ಹಾಡುಗಳ ಮೂಲಕ ಜನ ಮನಸುಗಳನ್ನು ಗೆದ್ದಿದ್ದಾರೆ.
ಅವರ ಗಾನಯಾತ್ರೆಯು ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. P Jayachandran ಅವರ ಸ್ಮರಣೆಗಳು ಸಂಗೀತ ಪ್ರಪಂಚದಲ್ಲಿ ಎಂದೆಂದಿಗೂ ಶಾಶ್ವತ. ಇವರ ಅಗಲಿಕೆಯು ಸಂಗೀತ ಲೋಕಕ್ಕೆ ತುಂಬಲಾರದ ದೊಡ್ಡ ನಷ್ಟವಾಗಿದೆ.