ನರಿಮೊಗರು: ನರಿಮೊಗರುವಿನ ಕೂಡುರಸ್ತೆ ಮೆನೆಯೊಂದರಲ್ಲಿ ಪಿಯೂಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಜ.9ರ ಸಂಜೆ ವರದಿಯಾಗಿದೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾಲೇಜಿನಿಂದ ಬಂದು ಆತ್ಮಹತ್ಯೆ!
ನರಿಮೊಗರು ಕೂಡುರಸ್ತೆಯ ಕೇಶವ ಎಂಬವರ ಪುತ್ರಿ ಸಂತ ಫಿಲೋಮಿನ ಕಾಲೇಜಿನ ಪ್ರಥಮ ಪಿಯೂಸಿ ವಿದ್ಯಾರ್ಥಿನಿ ದೀಕ್ಷಿತಾ(17) ಬೆಳಗ್ಗೆ ಕಾಲೇಜಿಗೆ ಹೋಗಿದ್ದರು. ಆದರೆ ಸಂಜೆ ಕಾಲೇಜಿನಿಂದ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಾರಣ ಏನು?
ಜ.9ರ ಬೆಳಗ್ಗೆ ಸಹಜವಾಗಿಯೇ ಕಾಲೇಜಿಗೆ ತೆರಳಿದ್ದ ದೀಕ್ಷಿತಾ ಸಂಜೆ ಮನೆಗೆ ಬಂದ ಬಳಿಕ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೀಕ್ಷಿತಾ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತ ದೀಕ್ಷಿತಾ ತಂದೆ-ತಾಯಿ ಹಾಗೂ ಸಹೋದರನನ್ನು ಅಗಲಿದ್ದಾಳೆ.