ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅನೇಕ ಭ್ರಷ್ಟಾಷಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಗ್ಯಾರಂಟಿ ಯೋಜನೆಯ ಮೂಲಕ ಜನರನ್ನು ಮಂಗ ಮಾಡಿ ಬೇರೆ ಮಾರ್ಗಗಳಲ್ಲಿ ಹಣವನ್ನು ಲೂಟಿ ಮಾಡುತ್ತಿದೆ.
ಇತ್ತೀಚೆಗೆ ವಾಲ್ಮೀಕಿ ಹಗರಣ, ಮೂಡಾ ಹಗರಣ ಪ್ರಕರಣಗಳು ಕಾಂಗ್ರೆಸ್ ನ ನಿಜರೂಪ ಬಯಲು ಮಾಡಿದೆ. ಈ ನಡುವೆ ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ರಾಜ್ಯ ಸರ್ಕಾರದ ವಿರುದ್ಧ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
`ದಲಿತ ಸಚಿವರಿಗೆ ಊಟಕ್ಕೂ ಸ್ವಾತಂತ್ರ್ಯ ಇಲ್ಲ'- ಯತ್ನಾಳ್
ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು, ಸಚಿವರಿಗೆ ಊಟ ಮಾಡಲೂ ಸ್ವಾತಂತ್ರ್ಯ ಇಲ್ಲ. ಅವರ ಪಾಡು ನಾಯಿಪಾಡಾಗಿದೆ. ಎಸ್‌ಸಿ-ಎಸ್‌ಪಿ, ಟಿಎಸ್‌ಪಿ ಹಣ ವರ್ಗಾವಣೆ, ವಾಲ್ಮೀಕಿ ನಿಗಮದ ಹಣ ದುರುಪಯೋಗದ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಅಸಮಾಧಾನ ಇದೆ.
ಆದರೆ ಅವರಿಗೆ ಹೇಳಿಕೊಳ್ಳುವಂತಿಲ್ಲ. ಇಂತಹ ಭ್ರಷ್ಟಾಚಾರ ಪ್ರಕರಣಗಳು ಬಯಲಾದಾಗಲೇ ಕಾಂಗ್ರೆಸ್ ನ ಮುಖವಾಡ ಕಳಚಿ ಬೀಳುವುದು. ಕಷ್ಟ-ಸುಖ ಹಂಚಿಕೊಳ್ಳಬಾರದು ಎಂದರೆ ಹೇಗೆ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.
ದಲಿತ ಸಚಿವರೊಬ್ಬರು ಏರ್ಪಡಿಸಿದ ಔತಣಕೂಟ ರದ್ದು, ಗರಂ ಆದ ಬಿಜೆಪಿ ಶಾಸಕ..!!
ಇವರು ಮಾಧ್ಯಮದವರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಸಚಿವರೊಬ್ಬರು ಔತಣ ಕೂಟ ಆಯೋಜಿಸಿದ ಕೂಡಲೇ ರದ್ದು ಮಾಡಿದ್ದಾರೆ. ಹಾಗಾದರೆ ಕಾಂಗ್ರೆಸ್ ನಲ್ಲೂ ಜಾತಿ ರಾಜಕಾರಣ ಆಗುತ್ತಿದೆಯೇ..? ಅದರಲ್ಲೂ ಡಾ| ಪರಮೇಶ್ವರ್ ಹಿರಿಯರು, ರಾಜಕೀಯ ಬಲ್ಲವರು.
ಅಷ್ಟೇ ಅಲ್ಲದೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಊಟ ಮಾಡಲೂ ಬಿಡುವುದಿಲ್ಲ ಎಂದರೆ ಏನರ್ಥ? ಹಾಗಾದರೆ ಸಿದ್ದರಾಮಯ್ಯ ಅನಂತರ ನಮ್ಮ ಗತಿಯೇನು? ಜೈಲಿಗೆ ಹೋಗಿ ಬಂದ ಭ್ರಷ್ಟ ವ್ಯಕ್ತಿ ಅಧಿಕಾರಕ್ಕೆ ಬಂದರೆ ಹೇಗೆ? ಹೀಗೆ ಸಾಕಷ್ಟು ವಿಷಯಗಳು ಕಾಂಗ್ರೆಸ್‌ನಲ್ಲಿರುವ ಎಸ್‌ಸಿ-ಎಸ್‌ಟಿ ಸಚಿವರನ್ನು ಕಾಡುತ್ತಿದೆ. ಆದರೆ ಅವರಿಗೆ ಅದನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶವಿಲ್ಲ.
ನೀವು ಈಗಲೇ ಬರೆದಿಟ್ಟುಕೊಳ್ಳಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪಗಳ ಮಳೆಗರೆದರೂ, ಅದು ಸತ್ಯವೆಂದು ಸಾಬೀತಾದರೂ ಅಧಿಕಾರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದರು.