ಅಸ್ಸಾಂ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದ ಮೇಲೆ ಗೋಹತ್ಯೆ ಪ್ರಕರಣ, ಲವ್ ಜಿಹಾದ್ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅನ್ಯಕೋಮಿನವರಿಗಂತೂ ಕಾಂಗ್ರೆಸ್ ಅಧಿಕಾರದ ಗದ್ದುಗೆಯೇರಿದ್ದು ದುಷ್ಕೃತ್ಯ ನಡೆಸಲು ಅವಕಾಶವಾದಂತಿದೆ.
ಇದೀಗ ಅಸ್ಸಾಂನ ಎಐಯುಡಿಎಫ್ ನ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಮುಸ್ಲಿಂ ಸಮುದಾಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ಭಾರೀ ವಿವಾದ ಸೃಷ್ಟಿಸಿದ ಇವರ ಹೇಳಿಕೆಯೇನು..?
ದರೋಡೆ, ರೇಪ್, ಡಕಾಯತಿ, ಲೂಟಿ ಮುಂತಾದ ಪ್ರಕರಣಗಳಲ್ಲಿ ಮುಸ್ಲಿಮರೇ ನಂ.1. ಇದು ಎಷ್ಟರ ಮಟ್ಟಿಗೆ ಸುಳ್ಳೆಂದು ನಿರೂಪಿಸಲು ಹೊರಟರೂ ಕೂಡಾ ವಾಸ್ತವ ಸತ್ಯ ಅದೇ ಇರೋದು ಎಂದು ಅಸ್ಸಾಂನ ಎಐಯುಡಿಎಫ್ ನ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ವಿವಾದವನ್ನು ಸೃಷ್ಟಿಸಿದೆ.
ಇವರ ಈ ಹೇಳಿಕೆಯನ್ನು ಮುಸ್ಲಿಂ ಸಮುದಾಯ ಕಟುವಾಗಿ ಖಂಡಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
`ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಕೊರತೆಯಿದೆ'
ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು `ಅತ್ಯಾಚಾರ, ಲೂಟಿ, ದರೋಡೆಯಂತಹ ಅನೇಕ ದುಷ್ಕೃತ್ಯಗಳಲ್ಲಿ ನಾವು ಮುಂದಿದ್ದೇವೆ. ಜೈಲಿಗೆ ಹೋಗುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರೋದೂ ನಾವೇ.
ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಸಮಯ ಸಿಗುತ್ತಿಲ್ಲ. ಆದರೆ ಇಂತಹ ಕೃತ್ಯಗಳನ್ನು ಮಾಡಲು ಸಮಯ ವ್ಯಯ ಮಾಡುತ್ತಾರೆ. ಎಲ್ಲಿ, ಯಾವುದೇ ತಪ್ಪು ನಡೆದ್ರೂ ಅಲ್ಲಿ ಒಬ್ಬ ಮುಸ್ಲಿಂ ಇದ್ದೇ ಇರುತ್ತಾನೆ ಎಂದು ಕಠೋರವಾಗಿ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆ ಬೆನ್ನಲ್ಲೇ ವಿರೋಧಗಳು ವ್ಯಕ್ತವಾಗಿದ್ದವು, ಇವರನ್ನು ಸಮುದಾಯದಿಂದ ಬಹಿಷ್ಕರಿಸುವ ಕೂಗು ಕೂಡಾ ಕೇಳಿಬಂದಿತ್ತು.
ಆದರೆ ಮತ್ತೆ ಕೂಡಾ ತಮ್ಮ ಹೇಳಿಕೆಯನ್ನು ಧೈರ್ಯವಾಗಿ ಸಮರ್ಥಿಸಿಕೊಂಡಿರುವ ಅವರು ಜಗತ್ತಿನಾದ್ಯಂತ ಮುಸ್ಲಿಮರಿಗೆ ಶಿಕ್ಷಣದ ಕೊರತೆ ಇದೆ. ಅದೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಹೇಳಿದ್ದಾರೆ.