ವಿಶಾಖಪಟ್ಟಣಂ| 14 ವರ್ಷದ ಬಾಲಕಿ ಮೇಲೆ ರೇಪ್..!! ಖ್ಯಾತ ಯೂಟ್ಯೂಬರ್ ಅರೆಸ್ಟ್, 20 ವರ್ಷ ಜೈಲು..!!

  • 11 Jan 2025 03:39:10 PM


ವಿಶಾಖ ಪಟ್ಟಣ: ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಪ್ರಕರಣದಲ್ಲಿ ಸಮಾಜದಲ್ಲಿ ಗುರುತಿಸಿಕೊಂಡಿರುವ ರಾಜಕೀಯದವರು, ಸೆಲೆಬ್ರೆಟಿಗಳು ಕೂಡಾ ಸಿಲುಕಿಕೊಂಡಿರೋದು ವಿಷಾದನೀಯ.

 

ಇದೀಗ ಅಚ್ಚರಿ ಎಂದರೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ ಖ್ಯಾತ ಯೂಟ್ಯೂಬರ್ ಮೇಲೆ ಅತ್ಯಾಚಾರ ಆರೋಪವೊಂದು ತಳುಕು ಹಾಕಿಕೊಂಡಿದ್ದು ಆತನನ್ನು ಬಂಧಿಸಲಾಗಿದೆ. 

 

ಅಪ್ರಾಪ್ತೆಯ ಮೇಲೆರಗಿದ ಖ್ಯಾತ ತೆಲುಗು ಯೂಟ್ಯೂಬರ್ ಅರೆಸ್ಟ್..! 

 

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತೆಲುಗು ಯೂಟ್ಯೂಬರ್ ಹಾಗೂ ಟಿಕ್ ಟಾಕ್ ನಲ್ಲಿ ಪ್ರಸಿದ್ಧಿ ಗಳಿಸಿದ್ದ ಚಿಪ್ಪದ ಭಾರ್ಗವ್ ನ್ನು ಪೊಲೀಸರು ಬಂಧಿಸಿದ್ದಾರೆ.

 

ಆತನಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಖಪಟ್ಟಣಂನ ಫೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ಬಾಲಕಿಯನ್ನು ಗರ್ಭಿಣಿ ಮಾಡಿರುವ ಕಾರಣಕ್ಕೆ 4 ಲಕ್ಷ ರೂ. ಪರಿಹಾರ ನೀಡುವಂತೆ ಆರೋಪಿಗೆ ಕೋರ್ಟ್ ಖಡಕ್ ಆದೇಶವನ್ನು ಹೊರಡಿಸಿದೆ. 

 

2021ರ ಪ್ರಕರಣ ಆರೋಪಿಗೆ ಶಿಕ್ಷೆ ನೀಡುವಲ್ಲಿ ಸುಖಾಂತ್ಯ..!

 

ಫನ್ ಬಕೆಟ್ ಭಾರ್ಗವ್ ಎಂದು ಹೆಸರಾಗಿರುವ ಭಾರ್ಗವ್ 2021ರಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರು. ಬಾಲಕಿ 4 ತಿಂಗಳ ಗರ್ಭಿಣಿ ಎಂದು ಗೊತ್ತಾದ ಬಳಿಕ ದೂರು ದಾಖಲಿಸಿದ್ದರು.

 

ಘಟನೆ ಕುರಿತಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿದ್ದರು. ಇದೀಗ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿದ್ದು 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.