ಕೇರಳ: ಇವತ್ತಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾವನ್ನು ಬಳಕೆ ಮಾಡದವರು ಬಹುಶಃ ಯಾರೂ ಇಲ್ಲ. ಇದನ್ನು ಉಪಯೋಗಿಸಿ ಹೆಸರು ಗಳಿಸಿದವರೂ ಇದ್ದಾರೆ. ದುರುಪಯೋಗಪಡಿಸಿಕೊಂಡು ಕುಖ್ಯಾತರಾದವರೂ ಇದ್ದಾರೆ. ಒಟ್ಟಾರೆಯಾಗಿ ಇದು ಸೋಷಿಯಲ್ ಮೀಡಿಯಾ ಜಮಾನ ಆಗಿರೋದ್ರಿಂದ ಇಲ್ಲಿ ಸಾಮಾನ್ಯನೂ ಸೆಲೆಬ್ರೆಟಿಯ ಜೊತೆ ಸಂಪರ್ಕ ಸಾಧಿಸಬಹುದು.
ಈ ರೀತಿ ಖ್ಯಾತ ನಟಿಗೆ ಅಶ್ಲೀಲ ಮೆಸೇಜ್ ಮಾಡಿ ಸಮಸ್ಯೆಗೆ ಸಿಲುಕಿಕೊಂಡಿರುವ ಖ್ಯಾತ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲಿ ಸಂಚಲನ ಸೃಷ್ಟಿಸಿದ ನಟಿ ಹನಿರೋಸ್ ಲೈಂಗಿಕ ಕಿರುಕುಳ ಪ್ರಕರಣ..!!
ತನ್ನ ಬ್ಯೂಟಿಯಿಂದಲೇ ರೀಲ್ಸ್ ಗಳಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ನಟಿ ಹನಿರೋಸ್ ಗೆ ಕಾಮುಕರ ಕಾಟ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ನಟಿಗೆ ಅಶ್ಲೀಲ ಮೆಸೇಜ್ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಖ್ಯಾತ ಉದ್ಯಮಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೇರಳದ ಪ್ರಮುಖ ಆಭರಣ ವ್ಯಾಪಾರಿ, ಶ್ರೀಮಂತ ಉದ್ಯಮಿ ಬಾಬಿ ಚೆಮ್ಮನೂರು ಬಂಧಿತ ಆರೋಪಿಯಾಗಿದ್ದಾರೆ.
ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿ ನೆಮ್ಮದಿ ಹಾಳು ಮಾಡುತ್ತಿದ್ದ ಒಟ್ಟು ಮೂವತ್ತು ಜನರ ಬಗ್ಗೆ ಈಕೆ ಕೇರಳ ಸಿಎಂಗೆ ದೂರನ್ನು ನೀಡಿದ್ದಾರೆ. ಈ ಬಗ್ಗೆ ಅವರು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಇದಕ್ಕಾಗಿ ಎಸ್ಐಟಿ ತಂಡವನ್ನು ರಚನೆ ಮಾಡಿದ್ದಾರೆ. ಚೆಮ್ಮನೂರು ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಿದ್ದು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ ಬಾಬಿ..!
ನಟಿ ಹನಿರೋಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಹೇರಿರುವ ಆರೋಪಗಳನ್ನು ತಳ್ಳಿ ಹಾಕಿದ ಬಾಬಿ ` ನಮ್ಮ ಮಳಿಗೆಗಳ ಉದ್ಘಾಟನೆಗೆ ಹನಿರೋಸ್ ಬರ್ತಾ ಇದ್ರು. ಆಗ ನಾವು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದೆವು.
ಅವರಿಗೆ ಜೋಕ್ ಹೇಳುತ್ತಿದ್ದೆ. ಒಟ್ಟಿಗೆ ಸಮಯವನ್ನು ಕಳೆಯುತ್ತಿದ್ದೆವು ಅಷ್ಟೆ' ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ.