ಪುತ್ತೂರು, ನರಿಮೊಗರು: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ದುಡುಕಿ ಕಾಲೇಜು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳ ಮನಸ್ಸು ಸಂಕುಚಿತವಾಗುತ್ತಿದ್ದು ತಮ್ಮ ಆತ್ಮಸ್ಥೈರ್ಯ ಕಳೆದುಕೊಂಡು ಜೀವಾಂತ್ಯಗೊಳಿಸುವ ನಿರ್ಧಾರಕ್ಕೆ ಬಂದು ತಲುಪಿದ್ದಾರೆ. ಇದೀಗ ಮೊನ್ನೆ ತಾನೇ ಪುತ್ತೂರಿನಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಹೊಸದೊಂದು ತಿರುವನ್ನು ಪಡೆದುಕೊಂಡಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್...!!
ಪುತ್ತೂರು ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಜ.9ರಂದು ಸಂಜೆ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನರಿಮೊಗರು ಕೂಡುರಸ್ತೆ ನಿವಾಸಿ ದೀಕ್ಷಿತಾ (17) ಜೀವಾಂತ್ಯಗೊಳಿಸಿದ ವಿದ್ಯಾರ್ಥಿನಿಯಾಗಿದ್ದಾಳೆ.
ಈ ಘಟನೆಯ ಬಳಿಕ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆಕೆಯ ಆತ್ಮಹತ್ಯೆಯ ಬಗ್ಗೆ ಮಹತ್ವದ ಸತ್ಯಾಂಶವನ್ನು ಪತ್ತೆಹಚ್ಚಿದ್ದಾರೆ.
ಮನೆಗೆ ಲೇಟ್ ಬಂದದನ್ನು ಪೋಷಕರು ಪ್ರಶ್ನಿಸಿದ್ದೇ ತಪ್ಪಾಯ್ತಾ...?
ಗುರುವಾರದಂದು ಕಾಲೇಜಿಗೆ ಹೋಗಿದ್ದ ದೀಕ್ಷಿತಾ ಸಂಜೆ ಹೊತ್ತು ಸ್ವಲ್ಪ ತಡವಾಗಿ ಮನೆಗೆ ಬಂದಿದ್ದಳು. ಇದನ್ನು ಮನೆಯವರು ಪ್ರಶ್ನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಸಿಡಿಮಿಡಿಗೊಂಡ ದೀಕ್ಷಿತಾ ದುಡುಕಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.