ಬೆಳ್ತಂಗಡಿ: ನಾಪತ್ತೆಯಾದ ಮುಸ್ಲಿಂ ಯುವತಿ ಹಿಂದು ಯುವಕನೊಂದಿಗೆ ವಿವಾಹವಾಗಿ ಪತ್ತೆ!

  • 12 Jan 2025 08:35:18 PM

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿನ ಸುಹಾನ (19) ಎಂಬ ಯುವತಿ ನಾಪತ್ತೆಯಾಗಿದ್ದು ಇದೀಗ ಹಿಂದೂ ಸಂಪ್ರದಾಯದಂತೆ ಹರೀಶ್ ಗೌಡ (24) ಎಂಬ ಯುವಕನೊಂದಿಗೆ ಮದುವೆಯಾಗಿದ್ದಾಳೆ ಎಂಬ ಘಟನೆ ಬೆಳಕಿಗೆ ಬಂದಿದೆ.

 

ಇವರು ಫೇಸ್‌ಬುಕ್ ಮೂಲಕ ಪರಿಚಯವಾಗಿ ಪ್ರೀತಿಯಲ್ಲಿ ತೊಡಗಿ, ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ. 

 

ಕಂಪ್ಯೂಟರ್ ತರಗತಿಗೆ ಹೋದ ಬಳಿಕ ಮನೆಗೆ ಮರಳಿ ತಿರುಗಿ ಬಾರದ ಸುಹಾನನ ಬಗ್ಗೆ ಆಕೆಯ ಕುಟುಂಬದವರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

 

ಮದುವೆಯಾದ ನಂತರ, ಜೋಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು, ಸುಹಾನ ಸ್ವಇಚ್ಛೆಯಿಂದ ಮದುವೆಯಾಗಿದ್ದು ದೃಢಪಡಿಸಿದ್ದಾರೆ.

 

ಈ ಘಟನೆಯು ಸ್ಥಳೀಯವಾಗಿ ಭಾರಿ ಚರ್ಚೆಗೆ ಕಾರಣವನ್ನುಂಟು ಮಾಡಿದೆ.