ಸಕಲೇಶಪುರ: ಮಳಲಿ ಗ್ರಾಮದಲ್ಲಿ ಹಿಂದೂ ಸಮುದಾಯದ ಸ್ಮಶಾನವನ್ನು ಧ್ವಂಸ ಮಾಡಿ, ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ನಡೆದಿದೆ. ಫೆಬ್ರುವರಿ ತಿಂಗಳಲ್ಲಿ ತಬ್ಬಲಿಕೆ ಜಮಾತ್ ನಡೆಸಲು ಮಾಡಿರುವ ಮಳಲಿ ಪಂಚಾಯತ್ ವ್ಯಾಪ್ತಿಗೆ ಸೇರಿದ 10 ಎಕರೆಗೂ ಹೆಚ್ಚು ಭೂಮಿಯನ್ನು JCB ಬಳಸಿ ಸಮತಟ್ಟೆಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅನೇಕ ಶತಮಾನಗಳಿಂದ ಶವಸಂಸ್ಕಾರ ನಡೆಯುತ್ತಿದ್ದ ಈ ಪವಿತ್ರ ಸ್ಥಳವನ್ನು ಧ್ವಂಸ ಮಾಡಿ ದೇವರ ಕಲ್ಲುಗಳು ಸಹ ಹಾನಿಗೊಲಿಸಿದ್ದಾರೆ.
ಅದಲ್ಲದೆ ಅನುಮತಿ ಪಡೆಯದೇ ಮತ್ತು ಸುರಕ್ಷತೆಯ ಮಾರ್ಗದರ್ಶಿಗಳನ್ನು ಪಾಲಿಸದೇ ಈ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ತಿರುವು ಮತ್ತು ವಾಹನ ನಿಲುಗಡೆಗಾಗಿ ಈ ಭೂಮಿಯನ್ನು ಬಳಸಲಾಗುತ್ತಿದ್ದು, ಪ್ರಾಧಿಕಾರಗಳ ಅನುಮತಿ ಇಲ್ಲದೆ ಈ ಕೆಲಸವನ್ನು ನಡೆಸಿದ್ದಾರೆ. ಈ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮತ್ತು ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟು ಮಾಡಿದೆ.
ಸ್ಥಳೀಯ ಹಿಂದೂ ಸಂಘಟನೆಗಳು ತಕ್ಷಣವೇ ಈ ದೌರ್ಜನ್ಯವನ್ನು ತಡೆಯ ಬೇಕೆಂದು JCB ಯಂತ್ರವನ್ನು ಜಪ್ತಿ ಮಾಡಬೇಕೆಂದು ಆಗ್ರಹಿಸುತ್ತಿವೆ ಎಂದು ಅಗ್ರಹವನ್ನು ವ್ಯಕ್ತ ಪಡಿಸಿದ್ದಾರೆ.ಜೊತೆಗೆ, ಚಾಲಕನ ವಿರುದ್ಧ 153/A ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಕೂಡ ಬೇಡಿಕೆ ಇಟ್ಟಿದೆ. ಗ್ರಾಮಸ್ಥರು ದೇವಾಲಯ ಮತ್ತು ಸ್ಮಶಾನದ ಪವಿತ್ರತೆಯನ್ನು ಕಾಪಾಡಲು ಹೋರಾಟ ಮುಂದುವರಿಸುತ್ತಿದ್ದು, ನ್ಯಾಯಕ್ಕಾಗಿ ಕಾನೂನಿನ ಮೊರೆ ಹೋಗಿದ್ದಾರೆ.