ಬೆಂಗಳೂರು: ಬೆಂಗಳೂರಿನ ಚಾಮರಾಪೇಟೆಯ ವಿನಾಯಕ ನಗರದಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳು ಮಲಗಿದ್ದ ಮೂರು ದನಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಅಮಾನವೀಯ ಘಟನೆ ರಾಜ್ಯದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಆ ಬಳಿಕ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರುಗಳು ಸ್ಥಳಕ್ಕಾಗಮಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು.ಇದೀಗ ಪೊಲೀಸ್ ಇಲಾಖೆ ಆರೋಪಿಯ ಹೆಡೆಮುರಿ ಕಟ್ಟಿದ್ದು, ಆತನ ಫೋಟೋ ವೈರಲ್ ಆಗುತ್ತಿದೆ.
ಬಿಹಾರ ಮೂಲದ ಆರೋಪಿ ಸಯ್ಯದ್ ಅರೆಸ್ಟ್!
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಎಲ್ಲೆಡೆ ಉದ್ವಿಗ್ನ ವಾತಾವರಣ ಸೃಷ್ಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿದೆ.ಬಂಧಿತ ಆರೋಪಿಯನ್ನು 30 ವರ್ಷದ ಸಯ್ಯದ್ ನಸ್ರು ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಈತ ಚಾಮರಾಜಪೇಟೆಯಿಂದ 50ಮೀ ದೂರದಲ್ಲಿರುವ ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಘಟನೆಯ ಬಳಿಕ ಕಣ್ಮರೆಯಾಗಿದ್ದ ಈತನನ್ನು ಇದೀಗ ಬಂಧಿಸಲಾಗಿದೆ.
ಕೆಚ್ಚಲು ಕತ್ತರಿಸಿ, ಮಚ್ಚಿನಿಂದ ಹಲ್ಲೆ ನಡೆಸಿದ ಸಯ್ಯದ್!
ಚಾಮರಾಜಪೇಟೆಯ ವಿನಾಯಕ ನಗರದ ಮೊಹಲ್ಲಾ ಬಳಿಯಲ್ಲಿ ಮಲಗಿದ್ದ ಹಸುಗಳ ಮೇಲೆ ಕುಡಿದ ಅಮಲಿನಲ್ಲಿ ಎರಗಿದ ಈ ಪಾಪಿ ಸಯ್ಯದ್ ನಸ್ರು ಕೆಚ್ಚಲು ಕತ್ತರಿಸಿದ್ದ, ಜೊತೆಗೆ ಹಸುಗಳ ಕಾಲಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದೆ. ಸದ್ಯ, ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.