ಚಿಕ್ಕಮಗಳೂರು|ಸ್ವೀಟ್ ಅಂಗಡಿಯಲ್ಲೂ ಸೇಲ್ ಆಗ್ತಿದೆ ಗೋಮಾಂಸ...!! ಇಬ್ಬರು ದುರುಳರನ್ನು ಅರೆಸ್ಟ್ ಮಾಡಿದ ಪೊಲೀಸರು...!

  • 14 Jan 2025 02:16:52 PM

ಚಿಕ್ಕಮಂಗಳೂರು : ರಾಜ್ಯದಲ್ಲಿ ಗೋಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಗೋಹಂತಕರು ನಿರ್ದಾಕ್ಷಿಣ್ಯವಾಗಿ ಗೋವುಗಳನ್ನು ಕೊಂದು ಮಂಸಕ್ಕಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ.

 

ಈ ಕುಕೃತ್ಯದ ಬಗ್ಗೆ ಹಿಂದೂ ಸಂಘಟನೆ ಯಾವಾಗಲೂ ಅಲರ್ಟ್ ಆಗಿ ಕಾರ್ಯಾಚರಿಸುತ್ತಿದೆ. ಗೋಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಸಕ್ರಿಯವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ ಇದೀಗ ಆಶ್ಚರ್ಯ ಎಂಬಂತೆ ಸ್ವೀಟ್ ಅಂಗಡಿಗಳಲ್ಲೂ ಕೂಡಾ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. 

 

ಸ್ವೀಟ್ ಅಂಗಡಿಯಲ್ಲಿ ಅಕ್ರಮ ಗೋಮಾಂಸ ಸಾಗಾಟ..!

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ಸ್ವೀಟ್ ಅಂಗಡಿಯಲ್ಲಿ ಗೋಮಾಂಸದ ಅಕ್ರಮ ಮಾರಾಟ ನಡೆಯುತ್ತಿರುವ ವಿಚಾರ ಬಹಿರಂಗಗೊಂಡಿದೆ.

 

ಅಸ್ಸಾಂನಿಂದ ಬಂದ ಇಬ್ಬರು ವ್ಯಕ್ತಿಗಳು ಸ್ವೀಟ್ ಮಾರಾಟದ ಜೊತೆಗೆ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.  

 

ಬ್ಲ್ಯಾಕ್ ಬ್ಯಾಗ್ ನಲ್ಲಿ ಸೇಲ್ ಆಗ್ತಿದೆ ಗೋಮಾಂಸಗಳು...!

 

ಬಂಧಿತ ಇಬ್ಬರು ವ್ಯಕ್ತಿಗಳು ಅಸ್ಸಾಂನಿಂದ ಬಂದು ಬಣಕಲ್‌ ಗ್ರಾಮದ ಸಂತೆಯಲ್ಲಿ ಸ್ವೀಟ್ ವ್ಯಾಪಾರದ ಜೊತೆಗೆ ಗೋಮಾಂಸವನ್ನು ಕೂಡಾ ಮಾರಾಟ ಮಾಡುತ್ತಿದ್ದರು. ಇವರು ಅಕ್ರಮ ಬಾಂಗ್ಲಾದೇಶದ ನಿವಾಸಿಗಳು ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

ಸ್ವೀಟ್ ಡಬ್ಬದ ಪಕ್ಕದಲ್ಲಿರುವ ಬ್ಲ್ಯಾಕ್ ಬ್ಯಾಗ್ನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಗೋಮಾಂಸ ಸಮೇತ ಮಾರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ತನಿಖೆ ಕಾರ್ಯ ಮುಂದುವರೆದಿದೆ.