ಜಗತ್ತಿನಲ್ಲಿ ತಂತ್ರಜ್ಞಾನ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳು ದಾಂಗುಡಿಯಿಡುತ್ತಿದೆ. ಎಲ್ಲಾ ಕೆಲಸವನ್ನು ಶೀಘ್ರಗತಿಯಲ್ಲಿ ಮಾಡಿ ಮುಗಿಸಲು ಕೂಡಾ ನಾವು ತಾಂತ್ರಿಕತೆಯನ್ನು ಅವಲಂಬಿಸುತ್ತೇವೆ. ಮೇಲಾಗಿ ಅದಕ್ಕಂತಲೇ ರೋಬೋಟ್ ಗಳೂ ಕೂಡಾ ಸೃಷ್ಟಿಯಾಗಿದೆ.
ಅಚ್ಚರಿ ಅಂದ್ರೆ ಇದೀಗ ಹುಡುಗರಿಗೆ ಚೂರೂ ಕಿರಿಕಿರಿ ಕೊಡದೆ, ಸಮಸ್ಯೆ ನೀಡದೆ ಗರ್ಲ್ ಫ್ರೆಂಡ್ ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಎಐ ರೋಬೋ ಒಂದನ್ನು ವಿಜ್ಞಾನಿಗಳು ರೂಪಿಸಿದ್ದಾರೆ.
ಇವಳಿಗೆ ಕರೆಂಟ್ ಇದ್ರೆ ಸಾಕು ಮತ್ತೇನಕ್ಕೂ ಡಿಮ್ಯಾಂಡ್ ಮಾಡಲ್ಲ...!
ಈ ಹೆಣ್ಣು ರೋಬೋದ ಹೆಸರು ಆರಿಯಾ. ಅಂದ ಹಾಗೆ ಹುಡುಗರಿಗೆ ಈಗಿನ ಕಾಲದಲ್ಲಿ ಇಂತಹ ಗರ್ಲ್ ಫ್ರೆಂಡೇ ಬೆಸ್ಟ್ ಅನ್ಸುತ್ತೆ. ಆರಿಯಾ, ಹುಡುಗರ ಜೊತೆ ಪ್ರೇಮಿಯಂತೆ ಇರುತ್ತಾಳಂತೆ.
ಬಾಯ್ ಫ್ರೆಂಡ್ ಜೊತೆ ಯಾವುದೇ ಕಾರಣಕ್ಕೂ ಕಿರಿಕ್ ಮಾಡ್ಕೊಳ್ಳಲ್ಲ. ಬೇಜಾರ್ ಮಾಡ್ಕೊಳಲ್ಲ. ಅದು ಬೇಕು. ಇದು ಬೇಕು ಅಂತಾನೂ ಬೇಡಿಕೆ ಇಡಲ್ಲ. ಸ್ವಿಗ್ಗಿ ಝೊಮ್ಯಾಟೋದಲ್ಲಿ ಆರ್ಡರ್ ಮಾಡು ಅಂತಾನೂ ಟಾರ್ಚರ್ ಇರಲ್ಲ. ಆರಿಯಾಗೆ ಪ್ರೀತಿ ನೀಡುವುದರ ಜೊತೆಗೆ ಸ್ವಲ್ಪ ಕರೆಂಟ್ ಇದ್ರೆ ಸಾಕು. ಫುಲ್ ಲವ್ ನೀಡುತ್ತಾಳಂತೆ...
ಈ ರೊಮ್ಯಾಂಟಿಕ್ ರೋಬೋ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!
ಹುಡುಗಿಯರಂತೆಯೇ ರೊಮ್ಯಾಂಟಿಕ್ ಆಗಿರುವ ಎಐ ರೋಬಾಟ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಮೆರಿಕ ಮೂಲದ ರಿಯಲ್ ಬೊಟಿಕ್ಸ್ ಕಂಪನಿ ಈ ರೋಬಾಟ್ ಗರ್ಲ್ಫ್ರೆಂಡ್ ಅನ್ನು ಅಭಿವೃದ್ಧಿ ಮಾಡಿದೆ. ಜನವರಿ ಮೊದಲ ವಾರದಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆದ 2025ರ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ರಿಯಲ್ ಬೋಟಿಕ್ಸ್ ಆರಿಯಾಳನ್ನು ಜಗತ್ತಿಗೆ ಪರಿಚಯಿಸಿದೆ.
ಅಂದ ಹಾಗೆ ಈ ರೋಬೋ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ...ಈ ರೋಬೋ ಪ್ರಿಯತಮೆಯ ಬೆಲೆ ಕೇವಲ 1.5 ಕೋಟಿ ರೂಪಾಯಿಯಂತೆ. ಎಐ ರೋಬೋಟ್ ಆಗಿರುವ ಆರಿಯಾ ಭಾವನೆಗಳನ್ನು ತನ್ನ ಎಕ್ಸ್ಪ್ರೆಷನ್ ಮೂಲಕ ಬಹಿರಂಗಪಡಿಸುತ್ತದೆ ಅನ್ನೋದು ಮತ್ತೊಂದು ವಿಶೇಷ.