ತೆಲಂಗಾಣ: ಇತ್ತೀಚಿನ ದಿನಗಳಲ್ಲಿ ಮಧ್ಯ ವಯಸ್ಕರಲ್ಲಿ ಕಾಮ ಅನ್ನೋದು ಹೆಚ್ಚಾಗಿ ಬಿಟ್ಟಿದೆ. ಸೋಷಿಯಲ್ ಮೀಡಿಯಾದ ಪ್ರಭಾವದಿಂದ ಸಂಬಂಧಗಳ ಮೌಲ್ಯ ಕುಂಠಿತಗೊಳ್ಳುತ್ತಿದೆ.
ಹೆತ್ತ ತಾಯಿಯ ಮೇಲೆ ಮಗ, ಸ್ವಂತ ತಂದೆಯಿಂದ ಮಗಳ ಮೇಲೆ ಹೀಗೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಸಮಾಜ ಹೊಲಸಾಗಿ ಬಿಟ್ಟಿದೆ. ಮಾನವೀಯ ಮೌಲ್ಯಗಳಂತೂ ಸತ್ತೇ ಹೋಗಿದೆ.
ಇಲ್ಲೊಬ್ಬ ಪಾಪಿ ತಂದೆ ಕೂಡಾ ತನ್ನ ತೆವಲನ್ನು ತೀರಿಸಿಕೊಳ್ಳಲು ಸ್ವಂತ ಮಗಳ ಮೇಲೆರಗಿದ್ದಾನೆ. ರೊಚ್ಚಿಗೆದ್ದ ಆತನ ಪತ್ನಿಯರು ಅದಕ್ಕೆ ಮಾಡಿದ್ದು ಕೇಳಿದ್ರೆ ನೀವು ಬೆಚ್ಚಿಬೀಳೋದಂತೂ ಗ್ಯಾರಂಟಿ..!
ಮಗಳ ಮೇಲೆ ಕಾಮ ತೀರಿಸಲು ಮುಂದಾದ ಗಂಡನ ಮರ್ಮಾಂಗ ಕಟ್...!!
ತನ್ನ ಮಗಳ ಮೇಲ ಅತ್ಯಾಚಾರ ಮಾಡಲು ಮುಂದಾದ ಗಂಡನನ್ನು ಪತ್ನಿಯರು ಸೇರಿ ಕೊಲೆಗೈದ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ. ಕೊಲೆಯಾದ ಮೃತ ವ್ಯಕ್ತಿಯನ್ನು ಚಾಲಕ ಎಂದು ಗುರುತಿಸಲಾಗಿದೆ.
ಈತ ಹಲವು ವರ್ಷಗಳ ಹಿಂದೆ ಒಬ್ಬಾಕೆಯನ್ನು ಮದುವೆಯಾಗಿದ್ದ. ಇವರಿಗೆ ಎರಡೂ ಹೆಣ್ಣು ಮಗು ಜನಿಸಿದ್ದರಿಂದ ಗಂಡು ಮಗುವಿನ ಮೋಹದಲ್ಲಿ ಈ ಭೂಪ ಆಕೆಯ ತಂಗಿಯನ್ನೂ ಮದುವೆಯಾಗಿದ್ದಾನೆ.
ಆಕೆಗೆ ಗಂಡು ಮಗು ಜನಿಸಿದ್ದು ಅವರೆಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಕಿರಿ ಮಗಳು ಸಾವನ್ನಪ್ಪಿದ ಮೇಲೆ ಈತನ ವರ್ತನೆಯಲ್ಲಿ ಅನೇಕ ಬದಲಾವಣೆಯಾಯಿತು. ಆತ ಮದ್ಯಕ್ಕೆ ದಾಸನಾದ. ಪತ್ನಿಯರಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ.
ಮಗಳ ಮೇಲಿತ್ತು ಕಾಮದ ಕಣ್ಣು, ಈತನ ಪಾಲಿಗೆ ಚಂಡಿಯಾದ್ರು ಇಬ್ಬರು ಪತ್ನಿಯರು...!
ಸಂಕ್ರಾಂತಿ ಹಬ್ಬದ ರಜೆಯ ಪ್ರಯುಕ್ತ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡ ಮಗಳು ಮನೆಗೆ ಆಗಮಿಸಿದ್ದಳು. ನಂತರ ಆತ ಅವಳಲ್ಲಿ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ.
ಈತನಲ್ಲಿ ನಡವಳಿಕೆ ಸರಿಪಡಿಸಿಕೊಳ್ಳಲು ಹೆಂಡತಿಯರು ಅದೆಷ್ಟೇ ಪ್ರಯತ್ನಿಸಿದರೂ, ಅತ್ತು ಗೋಗರೆದರೂ ಪ್ರಯೋಜನವಾಗಿಲ್ಲ. ಒಂದು ದಿನ ಈತನ ವರ್ತನೆ ಅತಿರೇಕಕ್ಕೆ ಹೋದಾಗ ರೊಚ್ಚಿಗೆದ್ದ ಪತ್ನಿಯರು ಆತನ ಮರ್ಮಾಂಗದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತನ ಸಹೋದರಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.