ಲವ್ ಜಿಹಾದ್| ಪ್ರೀತಿಸಿ ಮದುವೆಯಾಗಿ ಇಸ್ಲಾಂ ಮತಕ್ಕೆ ಮತಾಂತರವಾಗುವಂತೆ ಹೆಂಡ್ತಿಗೆ ಟಾರ್ಚರ್..! ಪತಿ ಶಫಿ ಅಹಮ್ಮದ್ ವಿರುದ್ಧ ದೂರು ದಾಖಲು!

  • 14 Jan 2025 04:53:40 PM


ಹುಬ್ಬಳ್ಳಿ: ರಾಜ್ಯದಲ್ಲಿ ಆಗಾಗ ಧರ್ಮದಂಗಲ್ ನಡೆಯುತ್ತಲೇ ಇರುತ್ತದೆ. ಅನ್ಯ ಮತೀಯರು ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳ ಜೀವನವನ್ನೇ ಹಾಳು ಮಾಡುತ್ತಿದ್ದಾರೆ.

 

ಇನ್ನೂ ಕೆಲವರು ಮದುವೆ ಆಗಿ ನರಕ ತೋರಿಸಿ ಬದುಕನ್ನೇ ಬರಡಾಗಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಭೂಪ ತನ್ನ ಹೆಂಡತಿಗೆ ಮತಾಂತರವಾಗುವಂತೆ ಪೀಡಿಸಿದ್ದು ಆತನ ಮೇಲೆ ಪ್ರಕರಣ ದಾಖಲಾಗಿದೆ.

 

ಹಿಂದೂವಿನಂತೆ ನಾಟಕವಾಡಿ ಮದ್ವೆಯಾಗಿದ್ದ ಶಫಿ ಅಹ್ಮದ್..!

 

ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಪತ್ನಿಗೆ ಕಿರುಕುಳ ನೀಡುತ್ತಿದ್ದ ಗಂಡನ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ. ಪತಿ ಶಫಿ‌ ಅಹ್ಮದ್ ಕರ್ನೂಲ್ ವಿರುದ್ಧ ಪತ್ನಿ ಲಕ್ಷ್ಮೀ ಕಿರುಕುಳಕ್ಕೆ ಸಂಬಂಧಿಸಿ ಆರೋಪ ಮಾಡಿದ್ದಾರೆ.

 

ಈ ದಂಪತಿ 2014-15ರಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. 2017ರಲ್ಲಿ ಅಧಿಕೃತವಾಗಿ ಮದುವೆಯಾಗಿದ್ದರು. ಬಳಿಕ ಈ ದಂಪತಿ ಹುಬ್ಬಳ್ಳಿಯ ಮಂಟೂರು ರಸ್ತೆಯ ಬಳಿ ವಾಸವಾಗಿದ್ದರು. ಅನಿಲ್ ಎಂಬ ಹೆಸರು ಹೇಳಿ, ಹಿಂದೂವಿನಂತೆ ನಾಟಕವಾಡಿ ಶಫಿ ಅಹ್ಮದ್ ಮದುವೆಯಾಗಿದ್ದ. 

 

ಈತನ ಹಿಂಸೆಯಿಂದ ಮುಕ್ತಿ ನೀಡುವಂತೆ ಠಾಣೆ ಮೆಟ್ಟಿಲೇರಿದ ಲಕ್ಷ್ಮಿ..!

 

ಶಫಿ ಸುಳ್ಳು ಹೇಳಿ, ಪ್ರೀತಿಸುವಂತೆ ನಾಟಕವಾಡಿ ಮದುವೆಯಾಗಿದ್ದಾನೆ ಅಷ್ಟೇ ಅಲ್ಲ ಮದುವೆ ಬಳಿಕ‌ ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿರುವುದಾಗಿ ಲಕ್ಷ್ಮೀ ಆರೋಪಿಸಿದ್ದಾರೆ.

 

ಸದ್ಯ ಈ ವಿಚಾರವಾಗಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಲಕ್ಷ್ಮೀ ದೂರು ನೀಡಿದ್ದಾರೆ. ಸುಳ್ಳು ಹೇಳಿ ವಿವಾಹವಾಗಿರುವುದರಿಂದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಫಿ ಅಹ್ಮದ್ನಿಂದ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಆಗುತ್ತಿದೆ. ದಯವಿಟ್ಟು ಆದಷ್ಟು ಶೀಘ್ರವಾಗಿ ಈತನಿಂದ ಮುಕ್ತಿ ಕೊಡಿಸಬೇಕು ಎಂದು ಲಕ್ಷ್ಮೀ ಪೊಲೀಸರಲ್ಲಿ ಗೋಗರೆದು ಮನವಿ ಮಾಡಿದ್ದಾರೆ.