'ವೋಕಲ್ ಫಾರ್ ಲೋಕಲ್': ಕರಾವಳಿ ಉತ್ಪನ್ನಗಳಿಗೆ ಪ್ರೋತ್ಸಾಹಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌ!

  • 14 Jan 2025 11:55:46 PM


ದ.ಕ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರಾವಳಿಯ ಉತ್ಸವಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ್ದಾರೆ. 

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ನವ ಭಾರತದ ಧ್ಯೇಯ 'ವೋಕಲ್ ಫಾರ್ ಲೋಕಲ್ ' ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಮಾಡುವ ದೃಷ್ಟಿಯಲ್ಲಿ ವಸ್ತು ಪ್ರದರ್ಶನ ಮಳಿಗೆಗಳಿಗೆ ತೆರಳಿ, ಕರಾವಳಿಯ ವೈವಿಧ್ಯತೆಗಳನ್ನು ಪ್ರತಿಬಿಂಬಿಸುವ ಸ್ವ ಉದ್ದಿಮೆ, ಗುಡಿ ಕೈಗಾರಿಕೆ ಹಾಗೂ ಇನ್ನಿತರ ವ್ಯಾಪಾರಿಗಳಿಗೆ ಪ್ರೋತ್ಸಾಹಕ ಮಾತುಗಳನ್ನು ಆಡಿದರು.

 

ಈ ವೇಳೆಯಲ್ಲಿ ಕರಕುಶಕರ್ಮಿ, ಸ್ವ ಉದ್ಯಮಿ, ವ್ಯಾಪಾರಸ್ಥರ ಸಬಲೀಕರಣಗೊಳಿಸುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತಾಗಿ ಅರಿವು ಮೂಡಿಸಿದರು.