ಕಡಬ: ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಸಯ್ಯದ್ ನಸ್ರು ಎಂಬಾತ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ. ಇದೀಗ ಕಡಬದಲ್ಲಿ ಎಂಟು ಹಸುಗಳನ್ನು ಒಂದು ಪಿಕಪ್ ನಲ್ಲಿ ಅತ್ಯಂತ ಅಮಾನವೀಯ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ರಾಕ್ಷಸರನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಪೊಲೀಸರು ಬಂಧಿಸಿದ್ದಾರೆ.ಈ ವಿಚಾರ ಜಿಲ್ಲೆಯಾದ್ಯಂತ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.
ಪೊಲೀಸರ ಮಿಂಚಿನ ಕಾರ್ಯಾಚರಣೆ!
ಜ.14ರ ಮುಂಜಾನೆ ಕಡಬ ಬಳಿಯ ಕೊಯಿಲದಲ್ಲಿ ಅಕ್ರಮವಾಗಿ ಪಿಕಪ್ ಒಂದರಲ್ಲಿ ಎಂಟು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪಿಕಪ್ ಅಡ್ಡಗಟ್ಟಿದ್ದಾರೆ. ಈ ವೇಳೆ ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ವಿಚಾರ ತಿಳಿದು ಹಲವು ಹಿಂದೂ ಸಂಘಟನೆಗಳು ಸ್ಥಳಕ್ಕಾಗಮಿಸಿ ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಹಿಂಸಾತ್ಮಕ ಸಾಗಾಟ, ಒಂದು ಹಸು ಸಾವು!
ಅಕ್ರಮವಾಗಿ ಹಸುಗಳನ್ನು ಪಿಕಪ್ ನಲ್ಲಿ ಸಾಗಿಸಲಾಗಿದೆ. ಜೊತೆಗೆ ಹಸುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು. ಕೈಕಾಲು, ಕತ್ತಿಗೆ ಹಗ್ಗ ಕಟ್ಟಿ ಬಳಿಕ ಅದೇ ಹಗ್ಗವನ್ನು ಮುಖಕ್ಕೆ ಬಿಗಿಯಲಾಗಿದೆ. ಇದರಿಂದಾಗಿ ಹಸುಗಳು ಬಹಳಷ್ಟು ನೋವನುಭವಿಸಿದ್ದು, ಒಂದು ಹಸು ಸಾವಿಗೀಡಾಗಿದೆ. ಸದ್ಯ, ಪಿಕಪ್ ವಾಹನ ಪೊಲೀಸರು ವಶ ಪಡಿಸಿಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.