ಮುಂಬೈ: ಕ್ಯಾನ್ಸರ್ ಎನ್ನುವಂತದ್ದು ಇತ್ತೀಚೆಗೆ ಸಮಾಜದಲ್ಲಿ ಹೆಚ್ಚಾಗಿ ವ್ಯಾಪಿಸಿರುವ ಒಂದು ಮಾರಣಾಂತಿಕ ರೋಗ. ಇದಕ್ಕೆ ಸೆಲೆಬ್ರೆಟಿಗಳು, ರಾಜಕೀಯದವರು, ಶ್ರೀಮಂತರು ಎಂಬ ಬೇಧವಿಲ್ಲ. ಯಾರನ್ನು ಬೇಕಾದರೂ ಆವರಿಸಿಕೊಂಡು ಬಿಡಬಹುದು. ಅದೇ ರೀತಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ನಟಿ ಹೀರಾ ಖಾನ್ ಅವರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ.
ನಟಿ ದೇಗುಲಕ್ಕೆ ಭೇಟಿ ನೀಡಿದ್ದೇ ತಪ್ಪಾಯ್ತೆ...?
ನಟಿ ಹೀನಾ ಖಾನ್ ಅವರು ಮುಸ್ಲಿಂ ಮತಕ್ಕೆ ಸೇರಿದವರು. ಕ್ಯಾನ್ಸರ್ ನ ಜೊತೆ ಪ್ರತಿದಿನ ಹೋರಾಟ ಮಾಡುತ್ತಿರುವ ಇವರ ಅಭಿಮಾನಿಗಳು ಇವರ ಆರೋಗ್ಯ ಚೇತರಿಕೆಗಾಗಿ ದರ್ಗಾ, ದೇಗುಲದಲ್ಲಿ ವಿಶೇಷ ಪ್ರಾರ್ಥನೆ, ಪೂಜೆಯನ್ನು ಸಲ್ಲಿಸಿದ್ದಾರೆ. ಇದಕ್ಕೆ ನಟಿ ಕೃತಜ್ಞತೆ ಸಲ್ಲಿಸಿ ನಿಮಗಮ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಕೂಡಾ ಹೇಳಿದ್ದರು.
ಇದೀಗ ಹೀನಾ ಖಾನ್ ಅವರು ಚೂಡಿದಾರ್ ಹಾಕಿಕೊಂಡು, ಹಣೆಗೆ ಕುಂಕುಮವನ್ನಿಟ್ಟು ಮುಂಬೈಯ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಆದ್ದರಿಂದ ಮುಸ್ಲಿಂ ವರ್ಗ ಇವರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿ ಅಲ್ಲಾ ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದು ಕೆಂಡಕಾರಿದ್ದಾರೆ.
ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಇವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಕೆಲವರು ನಟಿಯ ನಡೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹೀನಾ ಖಾನ್..!
2024ರಲ್ಲಿ ಇವರಿಗೆ ಸ್ತನ ಕ್ಯಾನ್ಸರ್ ತಗುಲಿರುವ ವಿಚಾರ ಗೊತ್ತಾಗಿದೆ. ಅಂದಿನಿಂದ ಇವರು ಗುಣಮುಖರಾಗಲು ಸರ್ಜರಿ, ರೇಡಿಯೇಶನ್, ಕಿಮೋಥೆರಪಿ ಮುಂತಾದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಇವರು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಪ್ಡೇಟ್ಸ್ ಕೊಡುತ್ತಿರುತ್ತಾರೆ.
ಆತ್ಮಸ್ಥೈರ್ಯವನ್ನು ಬಿಡದೆ ಇವರು ಇದರ ಜೊತೆಗೆ ತಮ್ಮ ವೃತ್ತಿರಂಗದಲ್ಲೂ ಮುಂದುವರೆದಿದ್ದಾರೆ. ಹೀನಾ ಒಬ್ಬ ನಿಜವಾದ ಫೈಟರ್ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.