ನಾಗಪುರ: ಇತ್ತೀಚಿಗಿನ ದಿನಗಳಲ್ಲಿ ಮಾನವೀಯತೆ ಅನ್ನುವಂತದ್ದು ಸತ್ತು ಹೋಗಿದೆ. ರಸ್ತೆ ಮಧ್ಯದಲ್ಲಿ ಅಪಘಾತಕ್ಕೊಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ರೆ ನಿಂತುಕೊಂಡು ವೀಡಿಯೋ ಮಾಡುತ್ತೇವೆ ಹೊರತು ಸಹಾಯಕ್ಕೆ ಹೋಗೋದು ಕಡಿಮೆ. ಕೆಲವರು ಮಾತ್ರ ಸರಿಯಾದ ಸಮಯದಲ್ಲಿ ಸಹಾಯ ಮಾಡಿ ಬೇರೊಬ್ಬರ ಜೀವ ಉಳಿಸಿ ದೇವರಾಗುತ್ತಾರೆ. ಇದೀಗ ಅಂತಹ ಪರೋಪಕಾರಿಗಳಿಗೆ ಕೇಂದ್ರ ಸಚಿವರೊಬ್ಬರು ಶುಭಸುದ್ದಿ ನೀಡಿದ್ದಾರೆ.
ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ್ರೆ 25000ರೂ. ಬಹುಮಾನ...!
ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ಉತ್ತಮ ಮನಸ್ಕರಿಗೆ 25000ರೂ. ಬಹುಮಾನ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಘೋಷಿಸಿದ್ದಾರೆ. ನಾಗಪುರದಲ್ಲಿ ನಡೆದ ರಸ್ತೆ ಸುರಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಗಡ್ಕರಿ ಅವರು `ಅಪಘಾತವಾದ ಮೊದಲ ಒಂದು ಘಂಟೆ ಅತ್ಯಂತ ಅಮೂಲ್ಯವಾಗಿದ್ದು ಆ ಸಂದರ್ಭ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ವ್ಯಕ್ತಿಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಂತವರಿಗೆ ಈಗ 5 ಸಾವಿರ ರೂ. ನೀಡಲಾಗುತ್ತಿದೆ. ಆದರೆ ಅದು ಯಾವುದಕ್ಕೂ ಸಾಲುತ್ತಿಲ್ಲ. ಆದ್ದರಿಂದ ಇನ್ಮುಂದೆ ಅವರಿಗೆ 25000 ಸಾವಿರ ರೂ. ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರಿಗೂ ಆಸ್ಪತ್ರೆ ವೆಚ್ಚ ಭರಿಸುವ ಭರವಸೆ...!
ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ ಆಗುವ 1.5 ಲಕ್ಷ ರೂ. ಆಸ್ಪತ್ರೆ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ರಾಜ್ಯ ಹೆದ್ದಾರಿಯಲ್ಲಿ ಗಾಯಗೊಂಡವರೂ ಕೂಡಾ ಇದರ ಫಲಾನುಭವಿಗಳಾಗಬಹುದು ಎಂದು ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದರು.