ಮಂಗಳೂರು| ಸೆಲೆಬ್ರೆಟಿ ಚಾಯ್ ವಾಲ,ವೈರಲ್ ಸ್ಟಾರ್;!ಕುಡ್ಲ ಫುಡ್ ಪೆಸ್ಟ್ ಗೆ ಚಾಯ್ ವಾಲ ಮೆರುಗು!

  • 15 Jan 2025 04:26:15 PM


ಮಂಗಳೂರು: ಮಂಗಳೂರಿನಲ್ಲಿ ಅನೇಕ ವಿಶೇಷ ಮೇಳಗಳು, ಸಂಭ್ರಮಾಚರಣೆಗಳು, ಬೀಚ್ ಉತ್ಸವಗಳು ನಡೆಯುತ್ತಲೇ ಇರುತ್ತದೆ. ಕರಾವಳಿಗರ ಅಭಿರುಚಿಗೆ ತಕ್ಕಂತೆ ಆಗಾಗ ಇಂತಹ ಅದ್ಧೂರಿ ಆಚರಣೆಗಳು ಆಯೋಜನೆಗೊಳ್ಳುತ್ತಿರುತ್ತದೆ. ಇಂತಹ ಆಚರಣೆಗಳನ್ನು ಕಣ್ತುಂಬಿಸಿಕೊಳ್ಳಲು ಬೇರೆ ಬೇರೆ ಕಡೆಯಿಂದ ಜನ ಮಂಗಳೂರಿಗೆ ಆಗಮಿಸುತ್ತಾರೆ.

 

ಇದೀಗ ಪ್ರತೀ ಬಾರಿಯಂತೆ ಈ ಬಾರಿಯೂ ಕೂಡಾ ಕುಡ್ಲ ಸಾಂಸ್ಕೃತಿಕ ಪ್ರತಿಷ್ಟಾನ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಜ.18ರಿಂದ ಜ.22ರವರೆಗೆ ಐದು ದಿನಗಳ ಕಾಲ ಮಂಗಳೂರಿನಲ್ಲಿ `ಸ್ಟ್ರೀಟ್ ಫುಡ್ ಫೆಸ್ಟ್' ನಡೆಯಲಿದೆ. ಈ ಮೇಳದಲ್ಲಿ ಭಾಗವಹಿಸಲು ಮಹಾರಾಷ್ಟ್ರ ನಾಗ್ಪುರದ ಖ್ಯಾತ ವೈರಲ್ ಸ್ಟಾರ್ ಡಾಲಿ ಚಾಯ್ ವಾಲ ( ಸುನಿಲ್ ಪಾಟೀಲ್) ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ.

 

ಇದರ ಮೊದಲ ದಿನದ ಕಾರ್ಯಕ್ರಮದಲ್ಲಿ ಆಕರ್ಷಿತ ಕೇಂದ್ರಬಿಂದುವಾಗಿ ಅವರು ಭಾಗವಹಿಸಲಿದ್ದಾರೆ. 

 

ಮಂಗಳೂರಿಗೆ ಆಗಮಿಸುವ ಕುರಿತು ಪೋಸ್ಟ್ ಮಾಡಿದ ಡಾಲಿ ಚಾಯ್ ವಾಲ...!!

 

ಡಾಲಿ ಚಾಯ್ ವಾಲ ಅವರು ಮಂಗಳೂರಿಗೆ ಆಗಮಿಸುತ್ತಿರುವುದರ ಕುರಿತು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು `ಜ.18ರಂದು ಮಂಗಳೂರಿನಲ್ಲಿ ಭೇಟಿ ಆಗೋಣ, ಮಜಾ ಕರೆಂಗೆ, ಚಾಯ್ ಪೀಯೆಂಗೆ' ಎಂದು ಪೋಸ್ಟ್ ಮಾಡಿದ್ದಾರೆ.

 

ಇವರ ಚಹಾ ಅಂಗಡಿಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಖ್ಯಾತ ಬಿಲ್ ಗೇಟ್ಸ್ ಅವರು ಕೂಡಾ ಭೇಟಿ ನೀಡಿ ಚಹಾ ಸವಿದು ಅದರ ಬಗ್ಗೆ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಡಾಲಿ ಚಾಯ್ ವಾಲ ಅವರು ದೇಶದಾದ್ಯಂತ ಹೆಚ್ಚು ಪ್ರಖ್ಯಾತರಾದರು.

 

ಇದೀಗ ಅವರು ಕರಾವಳಿಗೆ ಭೇಟಿ ನೀಡುತ್ತಿರೋದು ಮಂಗಳೂರಿಗರೂ ಕೂಡಾ ಫುಲ್ ಖುಷಿಯ ವಿಚಾರವಾಗಿದೆ.