ಹುಬ್ಬಳ್ಳಿ|ಇಂಥವರಿಗೆ ಯಾಕ್ ಬೇಕು ಲವ್...!! ಪ್ರೇಯಸಿಯ ಖಾಸಗಿ ಫೋಟೋ ಶೇರ್ ಮಾಡಿ, ಜೀವಾಂತ್ಯಗೊಳಿಸಿದ ಪ್ರಿಯಕರ..!

  • 16 Jan 2025 03:17:50 PM


ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಅರ್ಥನೇ ಇಲ್ಲದಂತಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪ ಹೆಚ್ಚಾಗಿ ಪ್ರೀತಿಯನ್ನು ದ್ವೇಷದಿಂದ ಅಂತ್ಯಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇನ್ನು ತಮ್ಮ ಪ್ರೀತಿಯನ್ನು ತುಂಬಾ ಸೀರಿಯೆಸ್ ಆಗಿ ತೆಗೆದುಕೊಳ್ಳುವವರು ಪ್ರೀತಿ ಸಿಕ್ಕಿಲ್ಕವೆಂದು, ದ್ರೋಹ ಆಯಿತ್ತೆಂದು ಆತ್ಮಹತ್ಯೆಗೆ ಕೂಡಾ ಶರಣಾಗುತ್ತಾರೆ.

 

ಇದೀಗ ಹುಬ್ಬಳ್ಳಿಯ ಯುವಕನೊಬ್ಬ ಕೂಡಾ ಇಂತಹುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಆದರೆ ಆತ ಅದಕ್ಕೂ ಮೊದಲು ಮಾಡಿರುವ ಕೆಲಸ ನಿಜಕ್ಕೂ ಶಾಕ್ ಆಗೋದಂತೂ ಗ್ಯಾರಂಟಿ...

 

ಪ್ರೇಯಸಿಯ ಖಾಸಗಿ ಫೋಟೋ ಶೇರ್ ಮಾಡಿ ಆತ್ಮಹತ್ಯೆಗೊಳಗಾದ ಯುವಕ..! 

 

ಯುವಕನೊಬ್ಬ ತನ್ನ ಪ್ರೇಯಸಿಯ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ನಂತರ ಜೀವಾಂತ್ಯಗೊಳಿಸಿದ ಘಟನೆ ಹುಬ್ಬಳ್ಳಿಯ ಉಣಕಲ್ ನಲ್ಲಿ ನಡೆದಿದೆ.

 

ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ ಉಣಕಲ್ (27) ಮೃತ ದುರ್ದೈವಿ. ಶನಿವಾರ ಮನೆಯಿಂದ ನಾಪತ್ತೆಯಾಗಿದ್ದ ಸಂದೇಶ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈತ ಬೈಕ್ ಶೋರೂಂನಲ್ಲಿ ಕೆಲಸ ಮಾಡಿಕೊಂಡಿದ್ದ. ಪ್ರೇಯಸಿಯ ಜೊತೆ ಮನಸ್ತಾಪ ಆಗಿ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. 

 

ಆತ್ಮಹತ್ಯೆಗೂ ಮುನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳಿಸಿದ್ದ ಸಂದೇಶ್...!

 

ಈತ ಕೆರೆಗೆ ಹಾರುವ ಮುನ್ನ ಸಂದೇಶ್ ` ನನ್ನ ಸಾವಿಗೆ ನಾನು ಪ್ರೀತಿಸಿದ್ದ ಯುವತಿ ಸಂಜನಾ ಕಾರಣ' ಎಂದು ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ಸ್ನೇಹಿತರಿಗೆ ಆಕೆಯ ಖಾಸಗಿ ಫೋಟೋಗಳು, ವೀಡಿಯೋಗಳು, ಪರಸ್ಪರ ಮಾಡಿಕೊಂಡಿದ್ದ ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿಕೊಂಡಿದ್ದಾನೆ.

 

ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದಾನೆ. ಪ್ರೇಯಸಿಯ ಕಾಟಕ್ಕೆ ಬೇಸತ್ತು ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.