ಪುತ್ತೂರು: ಅಂದು ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದಾತ್ಮಕ ಪೋಸ್ಟ್ ನ ಆರೋಪದ ಹಿನ್ನಲೆಯಲ್ಲಿ ಶರತ್ ಮಾಡಾವು, ಅಖಿಲ್, ಹಾಗೂ ಡಾಕ್ಟರ್ ಪ್ರವೀಣ್ ಪಾರೆ ವಿರುದ್ಧ ಪುತ್ತೂರು ಎಸ್‌ಐ ಆಂಜನೇಯ ರೆಡ್ಡಿ ಅವರು ಸುಮೋಟೋ ಕೇಸ್ ದಾಖಲಿಸಿದ್ದರು.
ಆ ವಿವಾದಾತ್ಮಕ ಪೋಸ್ಟ್ ಏನು ಗೊತ್ತಾ? :-
ಶರತ್ ಮಾಡಾವು ಅವರು ಪೋಸ್ಟ್ ಮಾಡಿದ ಬರಹ ಹೀಗಿತ್ತು. ಅಂದು ವಯನಾಡಿನ ರಸ್ತೆಯಲ್ಲಿ ಹತ್ಯೆಯಾಗಿದ್ದ ಗೋವುಗಳ ಆತ್ಮಕ್ಕೆ ಶಾಂತಿ ಸಿಗುತ್ತಿದೆ. ಗೋ ಮಾತೆಯ ರಕ್ತದಿಂದ ಮಲಿನವಾಗಿದ್ದ ಕೇರಳದ ಭೂಮಿಯನ್ನು ಪ್ರಕೃತಿಯೇ ಶುದ್ಧಗೊಳಿಸಿದೆ ಎಂದಾಗಿತ್ತು.
ಆರೋಪ:
ಈ ಬರಹದಲ್ಲಿ, ಭೂಕುಸಿತವನ್ನು ಹಿಂದೆ ನಡೆದ ಗೋಹತ್ಯೆ ಗೆ ಸಂಬಂಧಿಸಿದ ಘಟನೆಗಳನ್ನು ಲಿಂಕ್ ಮಾಡಿ ಧಾರ್ಮಿಕ ಮತ್ತು ಭಾವನಾತ್ಮಕ ಆಯಾಮವನ್ನು ಬೆಸೆದು, ವಾದಾತ್ಮಕ ಸಂದೇಶವನ್ನು ನೀಡುತ್ತಿದೆ ಎಂದು ಆರೋಪಿಸಲಾಗಿತ್ತು.
ಹೈಕೋರ್ಟ್ ತೀರ್ಪು:
ಈ ಆರೋಪದ ವಿರುದ್ಧ ಶರತ್ ಮಾಡಾವು ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘವಾದ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಈ ಪ್ರಕರಣಕ್ಕೆ ತಡೆಯಾಜ್ಞೆಯನ್ನು ನೀಡಿದೆ.
ಹೈಕೋರ್ಟ್‌ನಲ್ಲಿ ಶರತ್ ಮಾಡಾವು ಪರವಾಗಿ ಹೈಕೋರ್ಟ ವಕೀಲರಾದ ರಾಜಾರಾಮ್ ಸೂರ್ಯಂಬೈಲ್ ವಾದ ಮಂಡಿಸಿದರು.