ಗದಗ: ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಎಲ್ಲೆ ಮೀರಿ ಸಾಗುತ್ತಿದೆ. ಇದೀಗ 9ನೇ ತರಗತಿ ಯುವತಿಯೊಬ್ಬಳು ಅನ್ಯಕೋಮಿನ ಪಾಗಲ್ ಪ್ರೇಮಿಯ ನಿರಂತರ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಲ್ಲನ್ನೂ ಕರಗಿಸುವಂತಹ ಈ ದುರ್ಘಟನೆಯ ಇಂಚಿಂಚೂ ಮಾಹಿತಿ ಇಲ್ಲಿದೆ.
ಘಟನೆಯ ವಿವರ!
ಈ ದುರ್ಘಟನೆ ಸಂಭವಿಸಿರುವುದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ. ಇಲ್ಲಿನ ಖುಷಿ ಎಂಬ ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಆದರೆ ಶಾಲೆಗೆ ಹೋಗಿ ಬರುತ್ತಿದ್ದಾಗ ಜುನೇದ್ ಎನ್ನುವ ಅನ್ಯಕೋಮಿನ ಪಾಗಲ್ ಪ್ರೇಮಿಯೊಬ್ಬ ಲವ್ ಮಾಡು, ಲವ್ ಮಾಡು ಅಂತ ಖುಷಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದ.
ಮನೆಯವರು ಜುನೇದ್ ಗೆ ವಾರ್ನಿಂಗ್ ಮಾಡಿದ್ದರೂ ಕೂಡ ಆತ ತನ್ನ ಬುದ್ದಿ ಬಿಡದೆ ಮತ್ತೆ ಖುಷಿ ಹಿಂದೆ ಬಿದ್ದಿದ್ದ. ಈ ನಿರಂತರ ಕಿರುಕುಳದಿಂದ ಬೇಸತ್ತ ಖುಷಿ ಮನೆಯಲ್ಲಿ ಇದೀಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಲವ್ ಜಿಹಾದ್ ಆರೋಪ!
ಖುಷಿಯ ಆತ್ಮಹತ್ಯೆಯಿಂದಾಗಿ ಮನೆಯವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಆರೋಪಿ ಜುನೇದ್ ಮೇಲೆ ಪ್ರಕರಣ ದಾಖಲಾಗಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ ಈ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಖುಷಿ ಮನೆಗೆ ರಾಜಕೀಯ ಮುಖಂಡರು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.