ಪೆರ್ಲ| ಭರತನಾಟ್ಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಸಾಧನೆ: ಅನ್ವಿತಾ ಶೇಣಿಗೆ 92% ಅಂಕ

  • 18 Jan 2025 07:56:55 AM

ಪೆರ್ಲ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ನಡೆಸಿದ 2024-25ನೇ ಸಾಲಿನ ಭರತನಾಟ್ಯ ಪ್ರಾಥಮಿಕ ವಿಭಾಗದ ಪರೀಕ್ಷೆಯಲ್ಲಿ ಕು. ಅನ್ವಿತಾ ಶೇಣಿ 92% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 

ಕು. ಅನ್ವಿತಾ ನಾಟ್ಯ ನಿಲಯಂ ಮಂಜೇಶ್ವರದ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಹಾಗೂ ಶಿಕ್ಷಕಿ ಶಶಿರೇಖ ದಂಪತಿಗಳ ಸುಪುತ್ರಿಯಾಗಿದ್ದಾರೆ.