ಸುಳ್ಯ|ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪಾಪಿ ಗಂಡ..! ಆಮೇಲೆ ವಿಷ ಸೇವಿಸಿ ತಾನೂ ಜೀವಾಂತ್ಯಗೊಳಿಸಿದ ಭೂಪ..!

  • 18 Jan 2025 01:07:40 PM

ಸುಳ್ಯ:- ಇತ್ತೀಚಿನ ದಿನಗಳಲ್ಲಿ ಜನರಿಗೆ ಏನಾಗಿದೆಯೋ ಗೊತ್ತಿಲ್ಲ.ಎಲ್ಲಾ ಸಮಸ್ಯೆಗಳಿಗೂ ಸಾವೊಂದೇ ಪರಿಹಾರ ಎಂಬ ಭಂಡ ನಂಬಿಕೆಯಲ್ಲಿ ಜೀವನವನ್ನೇ ಹಾಳು ಮಾಡಿಕೊಳ್ಳುವ ಅದೆಷ್ಟೋ ಭೂಪರ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಒಬ್ಬರನ್ನೊಬ್ಬರು ಹತ್ಯೆ ಮಾಡುವ ಮನಸ್ಥಿತಿ ಹೇಗೆ ಬರುತ್ತೋ ಎಂಬುವುದೇ ಪ್ರಶ್ನೆಯಾಗಿ ಬಿಟ್ಟಿದೆ.

 

ಇದೀಗ ದ.ಕ ಜಿಲ್ಲೆಯ ಸುಳ್ಯದಲ್ಲೂ ಇಂತಹುದೇ ಹೃದಯವಿದ್ರಾವಕ ಘಟನೆ ನಡೆದಿದೆ. 

 

ಹೆಂಡ್ತಿಯನ್ನೇ ಹತ್ಯೆ ಮಾಡಿದ ಭೂಪ ನಂತರ ವಿಷ ಸೇವಿಸಿ ತಾನೂ ಜೀವಾಂತ್ಯ...!

ಪತಿಯೇ ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ತಾನೂ ವಿಷ ಸೇವಿಸಿ ಜೀವಾಂತ್ಯಗೊಳಿಸಿದ ಘಟನೆ ಸುಳ್ಯದ ಕೆಮ್ರಾಜೆಯ ಕೋಡಿಮಜಲು ಎಂಬಲ್ಲಿ ನಡೆದಿದೆ. 57 ವರ್ಷದ ರಾಮಚಂದ್ರ ಹಾಗೂ ಅವರ ಪತ್ನಿ ವಿನೋದ ( 47) ಮೃತ ದುರ್ದೈವಿಗಳೆಂದು ತಿಳಿದುಬಂದಿದೆ.

ಇವರು ಪತ್ನಿಯನ್ನು ಕೊಲೆ  ಮಾಡಿದಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

 

ಸುಳ್ಯ ಪೊಲೀಸರಿಂದ ತನಿಖೆ...!

ದಂಪತಿಯ ಸಾವು ಸುಳ್ಯದ ಕೆಮ್ರಾಜೆ ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ. ಪತ್ನಿಯನ್ನು ಗುಂಡಿಕ್ಕಿ ಕೊಂದ ರಾಮಚಂದ್ರ ಅವರು ನಂತರ ತಾನೂ ವಿಷ ಸೇವಿಸಿ ಜೀವಾಂತ್ಯಗೊಳಿಸಿರುವುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಈ ಬಗ್ಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ಒಟ್ಟಿನಲ್ಲಿ ಈ ಕೊಲೆ ಮತ್ತು ಆತ್ಮಹತ್ಯೆಗೆ ಕುಟುಂಬ ಕಲಹವೇ ಕಾರಣ ಎನ್ನಲಾಗುತ್ತಿದ್ದು ಸ್ಥಳೀಯರು ಕೂಡಾ ಈ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.