ಇಂಥಾ ಪೇರೆಂಟ್ಸೂ ಇರ್ತಾರಾ...? ಮಗಳನ್ನು ವೇಶ್ಯಾವಾಟಿಕೆಗೆ ದೂಡಿ ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಿದ ಪಾಪಿ ಹೆತ್ತವರು...!

  • 18 Jan 2025 01:14:21 PM

  ಇತ್ತೀಚಿನ ದಿನಗಳಲ್ಲಿ ಕಾಲ ಬದಲಾಗಿದೆ. ಮಾನವೀಯ ಮೌಲ್ಯಗಳು, ಸಂಸ್ಕೃತಿ-ಸಂಪ್ರದಾಯಗಳು ಅಳಿವಿನಂಚಿನಲ್ಲಿ ಸಾಗುತ್ತಿದೆ. ಈಗಿನ ಕಾಲದಲ್ಲಿ ಹಣಕ್ಕಾಗಿ ಜನ ಏನು ಮಾಡಲೂ ಸಿದ್ಧರಿದ್ದಾರೆ.ಸ್ವಂತ ಸಂಬಂಧಿಗಳ, ಆಪ್ತರ ಬದುಕಿನಲ್ಲಿ ಚೆಲ್ಲಾಟವಾಡಿ ಬೇಕಾದರೂ ಹಣ ಪಡೆಯುವ ನೀಚ ಕೃತ್ಯಕ್ಕೆ ಮನುಷ್ಯ ಬಂದು ತಲುಪಿದ್ದಾನೆ.

ಇದೇ ರೀತಿಯಲ್ಲಿ ನಡೆದ ಇಲ್ಲೊಂದು ಘಟನೆ ನಿಮ್ಮನ್ನು ಖಂಡಿತ ಅಚ್ಚರಿಗೊಳಿಸಬಹುದು. ಆದ್ರೆ ಶಾಕ್ ಆದ್ರೂ ಇದು ಸತ್ಯ...

ಸ್ವಂತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪೋಷಕರು..!!

ತಮ್ಮ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿ ಅಶ್ಲೀಲ ಫೋಟೋಗಳು, ವೀಡಿಯೊಗಳನ್ನು  ಹೆತ್ತವರೇ ಚಿತ್ರೀಕರಿಸಿದ ಘಟನೆ ಚೆನ್ನೈಯಲ್ಲಿ ನಡೆದಿದ್ದು ಇದೀಗ ಗಂಭೀರ ಆರೋಪದ ಹಿನ್ನೆಲೆ ದಂಪತಿಯನ್ನು ಬಂಧಿಸಲಾಗಿದೆ.

ಅವರಿಬ್ಬರೂ ಹಣ ಸಂಪಾದಿಸಲು ಆ ಫೋಟೋ, ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎನ್ನಲಾಗಿದೆ. ಆಕೆ ಅಪ್ರಾಪ್ತೆ ಆಗಿದ್ದ ಕಾರಣಕ್ಕೆ ವಿಷಯ ತಿಳಿದ ಮೇಲೆ ಮಕ್ಕಳ ಕಲ್ಯಾಣ ಸಮಿತಿ ದೂರು ದಾಖಲಿಸಿಕೊಂಡಿದೆ.

ನಂತರ ಪೊಲೀಸರು ದಂಪತಿಯನ್ನು ಪತ್ತೆ ಹಚ್ಚಿ ಆರೋಪಿಗಳಲ್ಲಿ ಒಬ್ಬರ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದು ಅದರಲ್ಲಿದ್ದ ಅಶ್ಲೀಲ ವೀಡೊಯೋಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ. 

ಹುಡುಗಿಯರ ಒಪ್ಪಿಗೆ ಇಲ್ಲದೆ ವೀಡಿಯೋಗಳನ್ನು ರೆಕಾರ್ಡ್ ಮಾಡ್ತಿದ್ರು...!!

ಹೆಚ್ಚಿನ ವೀಡಿಯೊಗಳನ್ನು ಹುಡುಗಿಯರ ಪರ್ಮಿಷನ್ ಇಲ್ಲದೆ ಸೀಕ್ರೆಟ್ ಕ್ಯಾಮೆರಾದಂತೆ ಕಾಣುವ ಕ್ಯಾಮೆರಾದ ಮೂಲಕ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ದಂಪತಿಯನ್ನು ಅರೆಸ್ಟ್ ಮಾಡಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಸರ್ಕಾರಿ ಆರೈಕೆ ಕೇಂದ್ರದಲ್ಲಿ ಇರಿಸಲಾಗಿದ್ದು, ಆಕೆ ಅನುಭವಿಸಿದ ಆಘಾತಕ್ಕೆ ಸೂಕ್ತ ಕೌನ್ಸೆಲಿಂಗ್ ನೀಡುವುದರ ಜೊತೆಗೆ ಇತರ ಅಗತ್ಯ ಬೆಂಬಲವನ್ನು ನೀಡಲಾಗಿದೆ. ಆರೋಪಿ ದಂಪತಿಗಳ ಮೊಬೈಲ್ ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸೂಕ್ತ ಸಾಕ್ಷ್ಯಾಧಾರಗಳು ಕಂಡುಬಂದ ಮೇಲೆ ಆರೋಪಿಗಳಿಗೆ ನ್ಯಾಯಾಲಯ ತೀರ್ಪು ನೀಡುವಂತೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.