ಧರ್ಮಸ್ಥಳ|ಬೈಕ್ ಸ್ಕಿಡ್ ಆಗಿ ರೋಡಿಗೆ ಬಿದ್ದ ಯುವಕ ಸ್ಪಾಟ್ ಡೆತ್...!! ಕಾರ್ಯಕ್ರಮಕ್ಕೆ ಹೋಗುತ್ತಿರುವಾಗಲೇ ನಡೆಯಿತು ದುರಂತ ಅಂತ್ಯ...!

  • 18 Jan 2025 01:39:02 PM

ಧರ್ಮಸ್ಥಳ: ದಿನಗಳಲ್ಲಿ ಪ್ರತೀ ದಿನ ಒಂದಲ್ಲ ಒಂದು ಕಡೆ ರಸ್ತೆ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅತೀ ವೇಗದ ಚಾಲನೆ ಮಾಡಿ ಯುವ ತರುಣರು ಕೂಡಾ ಸಣ್ಣ ಪ್ರಾಯದಲ್ಲೇ ಸಾವನ್ನಪ್ಪುತ್ತಿದ್ದಾರೆ. ಇದೀಗ ಧರ್ಮಸ್ಥಳದಲ್ಲಿ ಕೂಡಾ ಇಂತಹುದೇ ಒಂದು ದುರ್ಘಟನೆ ಸಂಭವಿಸಿದೆ. 

 

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್, ತಲೆಗೆ ಗಂಭೀರ ಗಾಯಗೊಂಡು ಯುವಕ ಸಾವು..!

 

ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರೋಡಿಗೆ ಬಿದ್ದು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಮುಂಡ್ರುಪಾಡಿ ನಿವಾಸಿ ಇಪ್ಪತ್ತೈದು ವರ್ಷದ ಮಿಥುನ್ ಕರ್ಕೇರ ಮೃತ ದುರ್ದೈವಿಯಾಗಿದ್ದಾನೆ.

ಈತ ಬಿದ್ದ ರಭಸಕ್ಕೆ ತಲೆಭಾಗಕ್ಕೆ ಗಂಭೀರ ಗಾಯವಾಗಿದ್ದು ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಈತ ಸಾವನ್ನಪ್ಪಿದ್ದಾನೆ. 

 

ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ನಡೆದೇ ಹೋಯ್ತು ಊಹಿಸಲಾಗದ ದುರಂತ..!

 

ಯಾವುದೋ ಸಮಾರಂಭಕ್ಕೆಂದು ಮಂಗಳೂರಿನಿಂದ ಧರ್ಮಸ್ಥಳದ ಕಡೆ ಪ್ರಯಾಣ ಬೆಳೆಸಿದ್ದ ಆತ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ರೋಡಿಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಗಾಯವಾದ ಕಾರಣ ಅಸುನೀಗಿದ್ದಾನೆ.

ಈತನ ತಂದೆ ನಾರಾಯಣ ಪೂಜಾರಿ ಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಂದೆ ಮತ್ತು ತಾಯಿ, ಸೋದರಿಯನ್ನು ಅಗಲಿದ್ದಾರೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.