ಕಡಬ| ಬೈಕ್ ನಲ್ಲಿ ಸ್ಪೀಡ್ ರೈಡ್...! ಮೋರಿಗೆ ಗುದ್ದಿ ಹತ್ತನೇ ತರಗತಿ ವಿದ್ಯಾರ್ಥಿ ಸ್ಪಾಟ್ ಡೆತ್...!

  • 18 Jan 2025 03:00:09 PM

ಕಡಬ: ಇತ್ತೀಚಿನ ದಿನಗಳಲ್ಲಿ ಅತೀ ವೇಗದ ಚಾಲನೆಯಿಂದಾಗಿ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ, ರಸ್ತೆ ನಿಯಮಗಳನ್ನು ಮೀರಿ ನಡೆಯುತ್ತಿರುವ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

 

ಅನೇಕ ಯುವತರುಣರು ಇದರಿಂದ ಸಾವಿಗೀಡಾಗುತ್ತಿದ್ದಾರೆ. ದುರದೃಷ್ಟವಶಾತ್ ಅತೀ ವೇಗದ ಚಲನೆಯಿಂದ ದ.ಕ ಜಿಲ್ಲೆಯಲ್ಲಿ ಇದೀಗ ಹತ್ತನೇ ತರಗತಿ ವಿದ್ಯಾರ್ಥಿ ಅಸುನೀಗಿದ್ದಾನೆ. 

 

ಕಂಟ್ರೋಲ್ ತಪ್ಪಿದ ಬೈಕ್ ಮೋರಿಗೆ ಗುದ್ದಿ ಬಾಲಕ ಸಾವು..!

 

ಕಡಬದ ಪೇರಡ್ಕ ಎಂಬಲ್ಲಿ ಅತೀ ವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮವಾಗಿ ನಿಯಂತ್ರಣ ತಪ್ಪಿ ಬೈಕೊಂದು ಮೋರಿಗೆ ಗುದ್ದಿ ಹತ್ತನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ.

 

ಕಲ್ಲುಗುಡ್ಡೆ ವಿಶ್ವನಾಥ ಎಂಬವರ ಪುತ್ರ, ಪೇರಡ್ಕ ಸಾಂತೋಮ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಆಶೀಶ್ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಅತೀ ರಭಸದಿಂದ ಬೈಕ್ ರೈಡ್ ಮಾಡುತ್ತಿದ್ದ ಕಾರಣಕ್ಕೆ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.

 

ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ನಡೆದ ದುರಂತ..!

 

ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ವಿದ್ಯಾರ್ಥಿ ಆಶೀಶ್ ಬೈಕ್ ಹಿಡಿದುಕೊಂಡು ಶಾಲೆಗೆ ಹೋಗುತ್ತಿರುವಾಗ ಈ ದುರಂತ ಸಂಭವಿಸಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರೂ ನಡು ದಾರಿಯಲ್ಲೇ ಈತ ಸಾವನ್ನಪ್ಪಿದ್ದಾನೆ.

 

ಕಡಬದಲ್ಲಿ ಸಣ್ಣ ಸಣ್ಣ ಮಕ್ಕಳ ಬೈಕ್ ರೈಡ್ ಹೆಚ್ಚಾಗುತ್ತಿದ್ದು ಇಂತಹ ದುರಂತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಇಂತಹ ವಿಚಾರದಲ್ಲಿ ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಿಸಬೇಕು ಎಂದು ಮನವಿ ಮಾಡಿದ್ದಾರೆ.