ಹೆಬ್ರಿ: ಸಮಾಜದಲ್ಲಿ ವಿಕೃತಿಗಳೇ ಹೆಚ್ಚಾಗುತ್ತಿದೆ. ಹೆತ್ತ ತಾಯಿಯ ಮೇಲೆ ಮಗ, ಸ್ವಂತ ಮಗಳ ಮೇಲೆ ತಂದೆ ಹೀಗೆ ಹೇಗೆ ಬೇಕೋ ಹಾಗೆ ಮನುಷ್ಯ ತಮ್ಮ ಕಾಮ ದಾಹವನ್ನು ತೀರಿಸಿಕೊಳ್ಳುತ್ತಿದ್ದಾನೆ. ಅಪ್ರಾಪ್ತರ ಮೇಲೆ ಅಷ್ಟೇ ಏಕೆ ಪುಟ್ಟ ಮಗುವಿನ ಮೇಲೂ ಮೃಗಗಳಿಗಿಂತಲೂ ಕಡೆಯಾಗಿ ಮೇಲೆರಗಿ ಪ್ರಾಣವನ್ನೇ ತಿಂದು ಬಿಡುವ ನೀಚ ಕಾಮುಕರು ನಮ್ಮ ಸುತ್ತಮುತ್ತಲಿದ್ದಾರೆ. ಇದೀಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ...?
2023ರ ಮಾರ್ಚ್ ನಲ್ಲಿ ಒಬ್ಬ ಯುವಕ ಅಪ್ರಾಪ್ತೆಯನ್ನು ರೇಪ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದ. ಈ ಬಗ್ಗೆ ಪ್ರಕರಣ ಕೂಡಾ ದಾಖಲಾಗಿತ್ತು. ಹೆಬ್ರಿ ಮುದ್ರಾಡಿಯ ಅಶ್ವತ್ಥ್ (22) ಶಿಕ್ಷೆಗೊಳಗಾದ ಯುವಕನಾಗಿದ್ದಾನೆ. ಈತ ಇನ್ಸ್ಟಗ್ರಾಂ ಮೂಲಕ ಬಾಲಕಿಯ ಜೊತೆ ಫ್ರೆಂಡ್ಶಿಪ್ ಬೆಳೆಸಿದ್ದ. ಅಶ್ವತ್ಥ್ ಆಕೆಯನ್ನು ಭೇಟಿಯಾಗುವಂತೆ ಒತ್ತಾಯಿಸಿ ಮುಲ್ಕಿ ಬಸ್ ನಿಲ್ದಾಣದಿಂದ ಬೈಕ್ ನಲ್ಲಿ ಮಣಿಪಾಲದ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರವೆಸಗಿದ್ದ ಕೃತ್ಯವನ್ನು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಸ್ನೇಹಿತರ ಜೊತೆ ಶೇರ್ ಮಾಡಿದ್ದ. ಈ ವೀಡಿಯೋ ಬಾಲಕಿಯ ತಂದೆಗೂ ಬಂದಿತ್ತು.
ಪ್ರಕರಣ ಪರಿಶೀಲಿಸಿ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ..!
ಬಾಲಕಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕೋರ್ಟ್ ನಲ್ಲಿ ಒಟ್ಟು 21 ಸಾಕ್ಷಿದಾರರನ್ನು ವಿಚಾರಿಸಿ 19 ದಾಖಲೆಗಳನ್ನು ಗುರುತಿಸಲಾಗಿತ್ತು. ಇದೀಗ ಆರೋಪಿಯ ವಿರುದ್ಧದ ಆರೋಪವು ನೈಜವೆಂದು ಸಾಬೀತಾಗಿದ್ದು ಆತನೇ ಅಪರಾಧಿ ಎಂಬುವುದು ದೃಢವಾಗಿದೆ. ಈತನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಸಂತ್ರಸ್ತ ಬಾಲಕಿಗೆ 4 ಲಕ್ಷ ರೂ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.