ಬಂಟ್ವಾಳ: 2024-25ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಯಡಿ, ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಕಂದಾಯ ನಿರೀಕ್ಷಕರನ್ನಾಗಿ ಉಲ್ಲೇಖ(1) ರಂತೆ ಶ್ರೀ ಎಂ.ಎನ್. ರವಿ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಈ ಹಿಂದೆ ಈ ವರ್ಗಾವಣೆಯ ವಿರುದ್ಧ ಶ್ರೀ ಎ ಪ್ರಶಾಂತ್ ಶೆಟ್ಟಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದರೂ ಅದನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ 19-08-2024 ರಂದು ಹೊರಡಿಸಿದ್ದ ಆದೇಶವು ಜಾರಿಯಾಗಿದೆ.
ಇದರ ಪ್ರಕಾರ 13-01-2025 ರಂದು ಶ್ರೀ ಎ ಪ್ರಶಾಂತ್ ಶೆಟ್ಟಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು 15-01-2025ರಂದು ಶ್ರೀ ಎಂ.ಎನ್. ರವಿ ಅವರನ್ನು ತಮ್ಮ ಹೊಸ ಹುದ್ದೆಗೆ ಹಾಜರಾಗುವಂತೆ ಸೂಚಿಸಿದೆ. ತಾತ್ಕಾಲಿಕವಾಗಿ ಪುಭಾರವನ್ನು ಶ್ರೀ ಶಶಿಕುಮಾರ ಎನ್.ಸಿ. ವಹಿಸಿಕೊಂಡಿದ್ದಾರೆ.
ಇತ್ತೀಚೆಗೆ, ವಿಟ್ಲ ಕಂದಾಯ ಕಚೇರಿಯ ಟೇಬಲ್ ಗ್ಲಾಸ್ ಹಾನಿ ಮಾಡಿದ್ದಾರೆ ಎಂದು ಮಂಗಳಪದವು ನಿವಾಸಿಯಾದ ಧನಂಜಯ್ ವಿರುದ್ಧ FIR ದಾಖಲಿಸಿದ್ದಾರೆ. ಈ ದೂರು ಅಮಾನವೀಯವಾಗಿದೆ ಎಂದು ದೇವಿ ಪ್ರಸಾದ್ ಶೆಟ್ಟಿ ಮತ್ತು ಅಕ್ಷಯ್ ರಾಜಪೂತ್ ಕಲ್ಲಡ್ಕ ಅವರು ಖಂಡಿಸಿದ್ದಾರೆ.
ನಟಕೀಯ ತಿರುವಿನಂತೆ, ಈ ಪ್ರಕರಣದ 2 ತಿಂಗಳ ನಂತರ RI ಪ್ರಶಾಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ.