ಹುಬ್ಬಳ್ಳಿ: ಪ್ರೀತಿಯ ಹೆಸರಲ್ಲಿ ಸಮಾಜದಲ್ಲಿ ಅದೆಷ್ಟೋ ಅನಾಚಾರಗಳು ನಡೆಯುತ್ತಿದೆ. ಕಾಮತೃಷೆಯನ್ನು ತೀರಿಸಿಕೊಳ್ಳಲು ಪ್ರೇಯಸಿಯನ್ನು ಬೇಕಾದಂತೆ ಬಳಕೆ ಮಾಡಿಕೊಳ್ಳುವ ತುಚ್ಛ ಮನಸ್ಕರಿಗೇನು ಕಡಿಮೆಯಿಲ್ಲ. ಸಮಾಜದಲ್ಲಿ ಹೊಲಸು ಮನಸ್ಥಿತಿಗಳು ಹೆಚ್ಚಾಗುತ್ತಿದೆ. ಇದೀಗ ಇಲ್ಲೊಬ್ಬ ಖತರ್ನಾಕ್ ಭೂಪ ಪ್ರೀತಿ ಹೆಸರಲ್ಲಿ ಚೆಲ್ಲಾಟವಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರೀತಿ ಹೆಸರಲ್ಲೇ ಹುಡುಗಿಯರ ಲೈಫ್ ಹಾಳು ಮಾಡ್ತಿದ್ದ ಭೂಪ...!
ಹುಬ್ಬಳ್ಳಿಯ ಈ ಕಾಮುಕ ಸಿಕ್ಕ ಸಿಕ್ಕ ಹುಡುಗಿಯರಲ್ಲಿ ಪ್ರೀತಿಸುವಂತೆ ನಾಟಕವಾಡಿ ಕೊನೆಗೆ ಮಂಚಕ್ಕೆ ಆಹ್ವಾನ ನೀಡುತ್ತಿದ್ದ. ಅವರೊಂದಿಗೆ ಕಾಮದಾಟವಾಡಿ ಅದನ್ನು ವೀಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಈ ವಿಕೃತಕಾಮಿಯನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಶರಾವತಿ ನಗರದ ನಿವಾಸಿ ೩೮ ವರ್ಷದ ಅಶ್ಪಾಕ್ ಜೋಗನಕೊಪ್ಪ ಬಂಧಿತ ಆರೋಪಿ. ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝೆರಾಕ್ಸ್ ಮತ್ತು ಮೊಬೈಲ್ ಸ್ಟೋರ್ ನಡೆಸಿಕೊಂಡು ಹೋಗುತ್ತಿದ್ದ.
ಹತ್ತಕ್ಕೂ ಹೆಚ್ಚು ಮಹಿಳೆಯರ ಜೊತೆ ದೈಹಿಕ ಸಂಪರ್ಕ ಇರಿಸಿಕೊಂಡಿದ್ದ ಕಾಮುಕ...!
ಈತನ ಶಾಪ್ ಗೆ ಬರುವ ಮಹಿಳೆಯರನ್ನು ಮನವೊಲಿಸಿ ಪ್ರೀತಿಸುವಂತೆ ನಾಟಕವಾಡಿ ನಂತರ ತನ್ನ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗುತ್ತಿದ್ದ. ಹಾಗೇ ಒಟ್ಟು ಹತ್ತಕ್ಕೂ ಹೆಚ್ಚು ಮಹಿಳೆಯರ ಜೊತೆ ಈತ ದೈಹಿಕ ಸಂಪರ್ಕ ಇರಿಸಿಕೊಂಡಿದ್ದ ಎಂಬ ಸತ್ಯಾಂಶ ವಿಚಾರಣೆ ವೇಳೆ ಬಯಲಾಗಿದೆ. ಈ ವಿಕೃತಕಾಮಿ ಅಪ್ರಾಪ್ತ ಬಾಲಕಿಯರನ್ನೂ ಬಿಟ್ಟಿಲ್ಲ.
ಈತನ ಮೊಬೈಲ್ ನಲ್ಲಿ ಅನೇಕ ಯುವತಿಯರ ಅಶ್ಲೀಲ ವೀಡಿಯೋಗಳು ಕೂಡಾ ಬಯಲಾಗಿದೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಈತನ ಬಗ್ಗೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.