ಬಿಯರ್ ಪ್ರಿಯರಿಗೆ ದೊಡ್ಡ ಶಾಕ್! ಕರ್ನಾಟಕದಲ್ಲಿ ಬಿಯರ್‌ ಬೆಲೆಯಲ್ಲಿ ಮತ್ತೆ ಏರಿಕೆ: ಜನಪ್ರಿಯ ಬ್ರ್ಯಾಂಡ್‌ಗಳಿಗೆ ₹10 ರಿಂದ ₹45 ಹೆಚ್ಚಳ!

  • 21 Jan 2025 03:18:38 PM

ಬೆಂಗಳೂರು: ಕರ್ನಾಟಕದಲ್ಲಿ ಬಿಯರ್‌ ಬೆಲೆ ಮತ್ತೊಮ್ಮೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಹೆಚ್ಚಿನ ಮಟ್ಟದಲ್ಲಿ ಹಣಕಾಸಿನ ಹೊರೆ ಉಂಟಾಗಿದೆ. ಎಲ್ಲ ಬಿಯರ್ ಬ್ರ್ಯಾಂಡ್‌ಗಳಿಗೂ ದರ ಏರಿಕೆ ಅಗಲ್ಲಿಲ್ಲ ಜನ ಸಾಮಾನ್ಯರು ಕೊಂಡು ಕೊಳ್ಳುವ , ಕೀಳದರ ಬ್ರ್ಯಾಂಡ್‌ಗಳ ಮೇಲೆ ಭಾರೀ ಪ್ರಮಾಣದಲ್ಲಿ ಬದಲಾವಣೆ ಉಂಟಾಗಿದೆ. 300 ರೂ ಒಳಗಿನ ಕೆಲವು ಬಿಯರ್ ಬ್ರ್ಯಾಂಡ್ ಗಳಿಗೆ ದರ ಹೆಚ್ಚಾಗಿದೆ.

 

ಜನಪ್ರಿಯ ಬಿಯರ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ದರ 10 ರಿಂದ 45 ರೂಪಾಯಿಯವರೆಗೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಇಂದಿನಿಂದ ಜಾರಿಯಾಗಲಿದೆ.

 

ಪ್ರಮುಖ ಬದಲಾವಣೆಗಳು:

 

ಲಜೆಂಡ್‌ ಬಿಯರ್: ಮೊದಲು ₹100 ಇದ್ದ ಬೆಲೆ, ಈಗ ₹145.

ಪವರ್‌ಕೂಲ್‌: ₹130-₹155.

ಬ್ಲ್ಯಾಕ್‌ ಫೋರ್ಟ್: ₹145-₹160.

ಹಂಟರ್‌ ಬಿಯರ್: ₹180-₹190.

ವುಡ್‌ಪೀಕರ್‌ ಗ್ಲೈಡ್ ಮತ್ತು ಕ್ರೆಸ್ಟ್: ತಲಾ ₹10 ಏರಿಕೆಯಾಗಿ ಕ್ರಮವಾಗಿ ₹240 ಮತ್ತು ₹250 ಈ  ಏರಿಕೆಗೆ ಸಿದ್ದರಾಮಯ್ಯ ಸರ್ಕಾರದ ಸುಂಕ ಹೆಚ್ಚಳವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕರ್ನಾಟಕದಲ್ಲಿ ಈ ವರ್ಷಕ್ಕೆ ಮೂರನೇ ಬಾರಿಗೆ ಬಿಯರ್ ದರ ಏರಿಕೆ ಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಐದು ಭಾರಿ ಬಿಯರ್ ಬೆಲೆಗಳು ಏರಿಕೆಯಾಗಿವೆ.