ಕೇರಳ| ಅಪರೂಪದ ಪ್ರಕರಣಕ್ಕೆ, ಮಹತ್ವದ ತೀರ್ಪು!;ಬ್ರೇಕಪ್ ಗೆ ಒಲ್ಲದ ಪ್ರಿಯತಮನಿಗೆ ವಿಷವುಣಿಸಿ ಕೊಂದ ಪಾಪಿ ಗ್ರೀಷ್ಮಾಳಿಗೆ ಮರಣದಂಡನೆ...!!

  • 21 Jan 2025 03:34:56 PM

ಕೇರಳ: ಪ್ರೀತಿ, ಪ್ರೇಮದ ವಿಚಾರದಲ್ಲಿ ಎಲ್ಲಾ ಕಡೆ ಹುಡುಗರದ್ದೇ ತಪ್ಪಿರುತ್ತೆ ಅನ್ನೋದು ಮೂರ್ಖತನ. ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರೀತಿ ಸಂಬಂಧಗಳು ನೈಜವಾಗಿ ಉಳಿದಿಲ್ಲ. ಪ್ರೀತಿ- ಪ್ರೇಮ ಸ್ವಾರ್ಥಕ್ಕಾಗಿ ಮಾಡುವ ವ್ಯವಹಾರ ಆಗಿಬಿಟ್ಟಿದೆ. ಪ್ರೀತಿ ವಿಚಾರದಲ್ಲಿ ಹುಡುಗಿಯರಿಗೂ ಕಠೋರ ವರ್ತನೆ ತೋರಿಸ್ತಾರೆ, ಅವರ ಮನಸ್ಸೂ ಕೆಲವೊಮ್ಮೆ ಕಲ್ಲಾಗುತ್ತೆ ಅನ್ನೋದಕ್ಕೆ ಕೇರಳದಲ್ಲೇ ಹೊಸ ಸಂಚಲನ ಮೂಡಿಸಿದ ಈ ಪ್ರಕರಣವೇ ಜ್ವಲಂತ ಸಾಕ್ಷಿ....

 

ಈಕೆ ಹೆಣ್ಣೋ ಹೆಮ್ಮಾರಿಯೋ....?!

 

ಗ್ರೀಷ್ಮಾ ಮತ್ತು ಶರೋನ್ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದಕ್ಕೂ ಮೊದಲು ಆಕೆ ಯೋಧನೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆ ಸಂದರ್ಭ ಆಕೆ ಶರೋನ್ ನ್ನು ಆದಷ್ಟು ದೂರ ಮಾಡಿದ್ದಳು. ಆದರೆ ಕ್ರಮೇಣ ಆತ ಅವಳಿಗೆ ಮತ್ತೆ ಹತ್ತಿರವಾಗಿದ್ದ. ವಿವಾಹವೂ ಆದರು. ಇದಾದ ಬಳಿಕ ಲೈಂಗಿಕ ಕ್ರಿಯೆ ನಡೆಸಲೆಂದೇ ರೂಮ್ ಕೂಡಾ ಬುಕ್ ಮಾಡಿದ್ದರು.

 

ಯೋಧನ ಜೊತೆ ತನ್ನ ಮದುವೆ ಡೇಟ್ ಹತ್ತಿರವಾಗುತ್ತಿದ್ದಂತೆ ಶರೋನ್ ನಿಂದ ದೂರಾಗಲು ಗ್ರೀಷ್ಮಾ ನಿರ್ಧರಿಸಿದ್ದಳು. ಈ ಸಂದರ್ಭ ವಿನಾಕಾರಣ ದೂರವಾಗುವಂತೆ ಆತನನ್ನು ಸಾಕಷ್ಟು ಮನವೊಲಿಸಿದ್ದಳು. ತನ್ನ ಜಾತಕದಲ್ಲಿ ಮೊದಲ ಪತಿ ವಿವಾಹವಾದ ಮೇಲೆ ಸಾಯುತ್ತಾನೆ ಎಂದಿದೆ ಎಂದು ಹೇಳಿ ಹೆದರಿಸುವ ಪ್ರಯತ್ನವೂ ನಡೆಸಿದ್ದಾಳೆ. ಆದರೆ ಆತ ಯಾವುದೇ ಕಾರಣಕ್ಕೂ ಅವಳಿಂದ ದೂರವಾಗಲು ಬಯಸಿಲ್ಲ. ಕೊನೆಗೆ ಆಕೆಯ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಕೊಲೆ ಮಾಡಲು ನಿರ್ಧರಿಸಿದ್ದಳು. 

 

ಸೆಕ್ಸ್ ಗಾಗಿ ಒತ್ತಾಯಿಸಿ ಮನೆಗೆ ಕರೆದು ಸಂಚು ರೂಪಿಸಿದ್ದ ಗ್ರೀಷ್ಮಾ...!!

 

ಮೊಬೈಲ್ ಕರೆಯಲ್ಲಿ ಗಂಟೆಗಳ ಕಾಲ ಸೆಕ್ಸ್ ವಿಚಾರದಲ್ಲಿ ಹರಟೆ ಹೊಡೆದಿದ್ದು ಇದೇ ಕಾರಣವನ್ನು ಮುಂದಿಟ್ಟುಕೊಂಡು ಲೈಂಗಿಕ ಕ್ರಿಯೆ ನಡೆಸಲು ಆತನನ್ನು ಒತ್ತಾಯ ಮಾಡಿದ್ದರಿಂದ ಅವನು ಮನೆಗೆ ಬಂದಿದ್ದಾನೆ. ಆಯುರ್ವೇದದ ಔಷಧಿಯಲ್ಲಿ ವಿಷ ಬೆರೆಸಿ ಕೊಟ್ಟು ಕೊಲೆ ಮಾಡಿದ್ದಾಳೆ.

 

ಕೂಡಲೇ ವಿಪರೀತ ವಾಂತಿ ಮಾಡಿಕೊಂಡು ಸ್ನೇಹಿತನ ಸಹಾಯದಿಂದ ಆತ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ ಶರೋನ್ ಗೆ ಆಕೆ ನೀಡಿದ ಜ್ಯೂಸ್ ನಲ್ಲಿ ಏನೋ ತಪ್ಪಾಗಿರೋದು ಗಮನಕ್ಕೆ ಬಂದಿದೆ. ಆಗ ಆತ ಯಾವುದೇ ಅನುಮಾನ ಆಕೆಯ ಮೇಲೆ ವ್ಯಕ್ತಪಡಿಸದೆ ವೀಡಿಯೋ ಮಾಡಿಕೊಂಡಿದ್ದ. ಆಕೆ ಈ ಖತರ್ನಾಕ್ ಕೆಲ್ಸ ಮುಗಿಸಿದ ಮೇಲೆ ನಂತರ ಆತನ ಜೊತೆ ಮಾಡಿದ ಎಲ್ಲಾ ಚಾಟ್ ಗಳನ್ನು ಡಿಲೀಟ್ ಮಾಡಿ ಡಿಲೀಟ್ ಮಾಡಿದ್ದ ಸಂದೇಶಗಳನ್ನು ಮತ್ತೆ ತೆಗೆಯಲಾಗುತ್ತದೆಯೇ ಎಂದು ಕೂಡಾ ಆಕೆ ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಾಳೆ. 

 

ಗ್ರೀಷ್ಮಾಳಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ..!

 

ತನಿಖೆಯ ಹಾದಿಯನ್ನು ತಪ್ಪಿಸಲು ಗ್ರೀಷ್ಮಾ ಆತ್ಮಹತ್ಯೆಗೆ ಯತ್ನಿಸುವಂತೆ ನಾಟಕವಾಡಿದ್ದಳು. ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಿದ ಪೊಲೀಸರನ್ನು ನ್ಯಾಯಾಲಯ ಶ್ಲಾಘನೆ ಮಾಡಿದೆ.

 

ಇದೀಗ ಪ್ರಕರಣದ ಮೊದಲ ಆರೋಪಿ ಗ್ರೀಷ್ಮಾಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು ಆಕೆಯ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್ ಗೆ ಮೂರು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ಎರಡು ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ನೀಡಿದೆ.