ಚಿಕ್ಕಮಂಗಳೂರು: ಚಿಕ್ಕಮಗಳೂರಿನಲ್ಲಿ ಯಾರೂ ಕಂಡ ಕೇಳರಿಯದ ದುರಂತವೊಂದು ನಡೆದು ಹೋಗಿದ್ದು, ಇಡೀ ಜಿಲ್ಲೆಯೇ ಶೋಕ ಸಾಗರದಲ್ಲಿ ಮುಳುಗಿದೆ.ಒಂದು ಕಡೆ ಮಗಳ ಸಂಭ್ರಮದ ವಿವಾಹ, ಮತ್ತೊಂದು ಕಡೆ ಹೆತ್ತ ತಂದೆಯ ದಾರುಣ ಸಾವು.ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಪಟ್ಟಣದಲ್ಲಿ. ಘಟನೆಯಲ್ಲಿ ಮಗಳ ತಂದೆ ಚಂದ್ರು ಎಂಬವರು ಮೃತಪಟ್ಟಿದ್ದು, ತಂದೆಯ ಸಾವಿನ ಸುದ್ದಿ ತಿಳಿಯದೆ ಮಗಳು ಮದುವೆಯಾಗಿದ್ದಾಳೆ. ಈ ಹೃದಯವಿದ್ರಾವಕ ಘಟನೆ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.
ತಂದೆಯ ಸಾವು, ಮಗಳ ಮದುವೆ!
ಜನವರಿ 20ರಂದು ಚಂದ್ರು ಅವರ ಮಗಳು ದೀಕ್ಷಿತಾ ಎಂಬಾಕೆಗೆ ಮದುವೆ ನಿಶ್ಚಯವಾಗಿತ್ತು. ಇತ್ತ ಚಂದ್ರು ಅವರು ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ಈ ನಡುವೆ ಜನವರಿ 19ರಂದು ರಸ್ತೆ ಅಪಘಾತದಲ್ಲಿ ಚಂದ್ರು ಸಾವನಪ್ಪಿದ್ದರು.
ಆದರೆ ಮದುವೆ ನಿಲ್ಲಬಾರದು ಎಂಬ ಕಾರಣಕ್ಕೆ ದೀಕ್ಷಿತಾ ಅವರೊಂದಿಗೆ ಸಂಬಂಧಿಕರು 'ಚಂದ್ರು ಆಸ್ಪತ್ರೆಯಲ್ಲಿದ್ದಾರೆ' ಎಂದು ಹೇಳಿ ಮದುವೆ ಮಾಡಿಸಿದ್ದಾರೆ.
ಮಂಟಪದಿಂದಲೇ ಓಡಿದ ನವಜೋಡಿ!
ಮದುವೆ ಮುಗಿಯುವ ತನಕವೂ ಕೂಡ ಚಂದ್ರು ಅವರು ಮೃತಪಟ್ಟ ವಿಚಾರ ಮಗಳು ಮತ್ತು ಅವರ ಪತ್ನಿಗೆ ತಿಳಿದೇ ಇರಲಿಲ್ಲ. 'ಮದುವೆಗಾಗಿ ಓಡಾಡಿ ಚಂದ್ರು ಸುಸ್ತಾಗಿ ಆಸ್ಪತ್ರೆ ಸೇರಿದ್ದಾರೆ' ಎಂದೇ ಸಂಬಂಧಿಕರು ಸುಳ್ಳು ಹೇಳಿದ್ದಾರೆ. ಆದರೆ ಮದುವೆಯ ಬಳಿಕ ಎಲ್ಲರಿಗೂ ವಿಷಯ ಗೊತ್ತಾಗಿದ್ದು, ನವಜೋಡಿ ಅಳುತ್ತಲೇ ಆಸ್ಪತ್ರೆಗೆ ಓಡಿದ್ದಾರೆ.
ಮದುವೆಯ ದಿನವೇ ತಂದೆಯ ಸಾವನ್ನು ಕಂಡಿರುವ ದೀಕ್ಷಿತಾರ ಆಕ್ರಂದನ ಕಲ್ಲನ್ನೂ ಕೂಡ ಕರಗಿಸುವಂತಿತ್ತು. ಸದ್ಯ, ಇಡೀ ತರಿಕೆರೆ ಪಟ್ಟಣದಲ್ಲಿ ಶೋಕ ಮಡುಗಟ್ಟಿದೆ.