ಮರ್ಯಾದೆಯಲ್ಲಿ ಮೊಬೈಲ್ ಕೊಡು, ಇಲ್ಲಾಂದ್ರೆ ಕೊಂದು ಹಾಕ್ತೇನೆ- ಚೇಂಬರ್ ಗೆ ನುಗ್ಗಿ ಫ್ರಿನ್ಸಿಪಾಲ್ ಗೆ ಅವಾಜ್ ಹಾಕಿದ ಸ್ಟೂಡೆಂಟ್...!!

  • 22 Jan 2025 06:38:51 PM

ಪಾಲಕ್ಕಾಡ್: ಶಾಲೆ, ಕಾಲೇಜು ಕಲಿಯುವ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಒಂದು ಚಟವಾಗಿ ಬಿಟ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ಮೊಬೈಲ್ ಬಳಸದೇ ಇದ್ದರೆ ನಿದ್ದೆ ಬರೋದಿಲ್ಲ. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಕೆಟ್ಟ ಚಟಕ್ಕೆ, ದುರಾಭ್ಯಾಸಕ್ಕೆ ಬಲಿಯಾಗುತ್ತಿದ್ದಾರೆ.

 

ಇದರ ಕಂಟ್ರೋಲ್ ಈಗಿನಿಂದಲೇ ಆಗದೆ ಇದ್ದರೆ ಜೀವನ ಭವಿಷ್ಯದಲ್ಲಿ ತುಂಬಾ ಕಷ್ಟ. ಮಕ್ಕಳಿಗೆ ಪೋಷಕರು, ಶಿಕ್ಷಕರು ಅದೆಷ್ಟೇ ಬುದ್ಧಿ ಹೇಳಿದರೂ ಅವರ ಮೇಲೆ ಆಕ್ರಮಣಕ್ಕೆ ಎದುರಾಗುತ್ತಾರೆ. ಇದೀಗ ಮೊಬೈಲ್ ಕೊಡದ ಪ್ರಾಂಶುಪಾಲರಿಗೆ ಪಿಯುಸಿ ವಿದ್ಯಾರ್ಥಿಯೋರ್ವ ಬೆದರಿಕೆ ಹಾಕಿದ ಘಟನೆಯೊಂದು ಅಚ್ಚರಿ ಮೂಡಿಸಿದೆ. 

 

ನಡೆದ ಘಟನೆ ಏನು..?

 

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅನಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲೆಗೆ ಮೊಬೈಲ್ ತರದಂತೆ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಈ ನಿಯಮವನ್ನು ಬ್ರೇಕ್ ಮಾಡಿ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಮೊಬೈಲ್ ತಂದಿದ್ದ.

 

ಅಲ್ಲದೆ ಕ್ಲಾಸ್ ನಡೆತುತ್ತಿರುವ ಸಂದರ್ಭ ಮೊಬೈಲ್ ಬಳಕೆ ಮಾಡುತ್ತಿದ್ದ. ಇದನ್ನು ನೋಡಿದ ಉಪನ್ಯಾಸಕರು ಆತನಿಂದ ಮೊಬೈಲ್ ಕಸಿದುಕೊಂಡು ನಂತರ ಅದನ್ನು ಪ್ರಾಂಶುಪಾಲರಿಗೆ ನೀಡಿದ್ದಾರೆ. ಈ ಸಂದರ್ಭ ವಿದ್ಯಾರ್ಥಿ ಸಿಟ್ಟಿನಿಂದ ಕೆಂಡಾಮಂಡಲನಾಗಿದ್ದಾನೆ. 

 

ಪ್ರಾಂಶುಪಾಲರಿಗೆ ಕೊಲೆ ಮಾಡುವುದಾಗಿ ಬೆದರಿಸಿ ಧಿಮಾಕು ತೋರಿದ ವಿದ್ಯಾರ್ಥಿ...!!

 

ಮೊಬೈಲ್ ಕಸಿದುಕೊಂಡಿದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ ನೇರವಾಗಿ ಪ್ರಿನ್ಸಿಪಾಲ್ ಚೇಂಬರ್ ಗೆ ಹೋಗಿ ಮೊಬೈಲ್ ಕೊಡಿ ಎಂದು ಒತ್ತಾಯಿಸಿದ್ದಾನೆ. ಆದರೆ ಅದಕ್ಕೆ ಅವರು ಒಪ್ಪದಿದ್ದಾಗ ಸಿಡಿಮಿಡಿಗೊಂಡು ಮರ್ಯಾದೆಯಲ್ಲಿ ಮೊಬೈಲ್ ಕೊಡಿ, ಕೊಡದೇ ಇದ್ದರೆ ಕೊಲೆ ಮಾಡ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ಪ್ರಾಂಶುಪಾಲರು ಪಿಟಿಎ ತ್ರಿಥಾಲ ಪೊಲೀಸರಿಗೆ ದೂರು ನೀಡಿದ್ದಾರೆ.

 

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇಷ್ಟು ಸಣ್ಣ ಪ್ರಾಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಪ್ರದರ್ಶಿಸುವ ನೀಚ ವರ್ತನೆ, ಶಿಕ್ಷಕರಿಗೆ ಅಗೌರವ, ಅವಾಚ್ಯ ಶಬ್ಧಗಳ ಬಳಕೆ ಅತಿರೇಕದ ವರ್ತನೆ ನಿಜಕ್ಕೂ ಶಿಕ್ಷಕರನ್ನು ಮತ್ತು ಪೋಷಕರನ್ನು ಗಾಬರಿಗೊಳಿಸಿದೆ.