ವಿಟ್ಲ : ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಡ್ರೋಣ್ ನಿಯಂತ್ರಣ ತಪ್ಪಿ ದೇವರ ಪ್ರಭಾವಳಿಗೆ ಬಂದು ಬಡಿದ ಘಟನೆ ಸಂಭವಿಸಿದೆ.
ಉತ್ಸವ ಮೂರ್ತಿ ರಥಕ್ಕೆ ಏರುವಡ್ರೋನ್ ಸಮಯದಲ್ಲಿ ದೇವರ ಪ್ರಭಾವಳಿಗೆ ಡ್ರೋನ್ ಬಂದು ಬಡಿದಿದೆ. ರಥದ ಮೇಲಿದ್ದ ಸಹಾಯಕ ಅರ್ಚಕರ ತಲೆಗೆ ಬಡಿದು ಬಿದ್ದಿದೆ. ಒಮ್ಮೆಗೆ ಈ ಘಟನೆಯಿಂದ ದೇವರ ಮೂರ್ತಿ ಹೊತ್ತ ಅರ್ಚಕರು ತಬ್ಬಿಬ್ಬಾಗಿದ್ದಾರೆ. ಅವರು ಒಂದು ಚೂರು ನಿಯಂತ್ರಣ ತಪ್ಪಿದ್ದರೂ ಸಹ ದೇವರ ಉತ್ಸವ ಮೂರ್ತಿ ಸಹಿತ ಅವರೂ ಕೆಳಕ್ಕೆ ಬೀಳುತ್ತಿದ್ದರು. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಲಿಲ್ಲ. ತಕ್ಷಣ ಅರ್ಚಕರು ಡ್ರೋನ್ ಅನ್ನು ಒತ್ತು ಎಸೆದಿದ್ದಾರೆ.
ಡ್ರೋನ್ ಅಪರೇಟರ್‌ನ ನಿರ್ಲಕ್ಷ್ಯ ಮತ್ತು ಅಸಡ್ಡೆ ಮನೋಭಾವನೆಗೆ ಭಕ್ತರು ತೀವ್ರ ಆಕ್ರೋಶಗೊಂಡಿದ್ದಾರೆ. ಡ್ರೋನ್ ಬಳಕೆ ಹಾಗೂ ಸುರಕ್ಷಾ ತಾತ್ಸಾರ ಭವ್ಯ ಉತ್ಸವಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬ ಹಿತೋಪದೇಶವನ್ನು ಈ ಘಟನೆ ಹೇಳುತ್ತದೆ.