ವಿಟ್ಲ : ಶ್ರೀ ಪಂಚಾಲಿಂಗೇಶ್ವರ ದೇವರ ಜಾತ್ರಾ ರಥೋತ್ಸವ ಸಂಧರ್ಭದಲ್ಲಿ ದೇವಸ್ಥಾನದ ವಠಾರದಲ್ಲಿರುವ ಅನಂತೇಶ್ವರ ದೇವಸ್ಥಾನದ ಬಳಿ ಅನ್ಯಮತಿಯ ವ್ಯಕ್ತಿಗಳು ಸಂತೆ ಹಾಕಿದ್ದರು. ಇದನ್ನು ಕಂಡ ಹಿಂದೂ ಕಾರ್ಯಕರ್ತರು ತಕ್ಷಣ ತೆರವು ಮಾಡಿಸಿದ್ದಾರೆ.
ಖಾಸಗಿ ವ್ಯಕ್ತಿಯು ಪಂಚಾಯತ್ ನಿಂದ ಟೆಂಡರ್ ನ ಮೂಲಕ ಜಾಗವನ್ನು ಪಡೆದು ಸಂತೆ ಹಾಕುವವರಿಗೆ ಹಂಚಿ ಕೊಡುವುದು ನಿಯಮ. ಆದರೆ ಇಲ್ಲಿಬ್ಬರು ಅನ್ಯಮತೀಯ ಸಂತೆ ವ್ಯಾಪಾರಸ್ಥರು ನಿಯಮವನ್ನು ಉಲ್ಲಂಘಿಸಿ ಪರವಣಿಗೆ ರಹಿತ ಸಂತೆಯನ್ನು ಹಾಕಿದ್ದಾರೆ. ಅದನ್ನು ತಿಳಿದ ಹಿಂದು ಕಾರ್ಯಕರ್ತರು ತಕ್ಷಣ ಸಂತೆಯನ್ನು ತೆರವು ಗೊಳಿಸಿದ್ದಾರೆ.
ಈ ಘಟನೆಯು ಹಿಂದೂ ಕಾರ್ಯಕರ್ತರಲ್ಲಿ ಹೆಚ್ಚು ತೀವ್ರ ಚರ್ಚೆಗೆ ಕಾರಣವಾಯಿತು. ಅವರು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಶುದ್ಧ ಹಿಂದೂ ಶೈಲಿಯ ಉತ್ಸವವಾಗಿರಬೇಕೆಂದೂ ಅನ್ಯಮತೀಯ ಚಟುವಟಿಕೆಗಳನ್ನು ಧಾರ್ಮಿಕ ಸ್ಥಳಗಳಲ್ಲಿ ಅನುಮತಿ ನೀಡಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂ ದೇವಾಲಯದ ಜಾತ್ರಾ ಮಹೋತ್ಸವವು ಸಂಪೂರ್ಣ ಹಿಂದೂಮಯ ವಾಗಿರಬೇಕೆಂಬ ಅಭಿಯಾನವನ್ನು ಈ ಮೂಲಕ ಚಾಲನೆ ನೀಡಲಾಯಿತು. ಇದಕ್ಕೆ ಭಕ್ತರಿಂದ ಬೃಹತ್ ಬೆಂಬಲ ದೊರಕಿದೆ.